ಮಂಗಳೂರು, ಜೂ 01 (DaijiworldNews/SM): ಕಾಂಗ್ರೆಸ್ ಪಕ್ಷ ಚುನಾವಣೆ ಬಂದಾಗ ಗ್ಯಾರಂಟಿ ಘೋಷಿಸಿತ್ತು. ಮಲ್ಲಿಕಾರ್ಜುನ ಖರ್ಗೆ, ರಾಹುಲ್, ಪ್ರಿಯಾಂಕ, ಸೋನಿಯಾ, ಸಿದ್ದರಾಮಯ್ಯ, ಡಿಕೆಶಿ ಘೋಷಣೆ ಮಾಡಿದ್ದರು. ಗ್ಯಾರಂಟಿ ಕಾರ್ಡ್ ಹಿಡಿದು ರಾಜ್ಯದ ಎಲ್ಲಾ ಜನರಿಗೂ ಕೊಡ್ತೇವೆ ಅಂದಿದ್ದರು. 24 ಗಂಟೆಯಲ್ಲಿ ಅಂದರೂ ಅಧಿಕಾರಕ್ಕೆ ಬಂದು 20 ದಿನಗಳಾಗ್ತಾ ಬಂದಿದೆ ಇಲ್ಲಿಯ ತನಕ ಗ್ಯಾರಂಟಿ ಜಾರಿಗೆ ತಂದಿಲ್ಲ. ಕಾಂಗ್ರೆಸ್ ಸುಳ್ಳುಗಾರರ ಮತ್ತು ಮೋಸಗಾರರ ಪಾರ್ಟಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಮೀಟಿಂಗ್ ಗಳನ್ನೇ ಮಢ್ತಾ ಇದ್ದಾರೆ ಹೊರತು ಇನ್ನೂ ಜಾರಿಗೆ ಬಂದಿಲ್ಲ. ಹಾಗಾಗಿ ಕಾಂಗ್ರೆಸ್ ಜನರನ್ನ ಮೂರ್ಖರನ್ನಾಗಿ ಮಾಡಿದೆ, ಕ್ಷಮೆ ಕೇಳಲಿ. ಜನ ಕರೆಂಟ್ ಬಿಲ್ ಕಟ್ತಾ ಇಲ್ಲ, ಬಸ್ ಗಳಲ್ಲಿ ಟಿಕೆಟ್ ಕೊಡ್ತಾ ಇಲ್ಲ. ಅಡ್ಡ ದಾರಿ ಹಿಡಿದು ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಹಣಕಾಸು ಸಚಿವ, ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಗೊತ್ತಿದ್ದೂ ಸುಳ್ಳು ಹೇಳಿದ್ದಾರೆ. ಹಣಕಾಸು ಇಲಾಖೆ ಈ ಯೋಜನೆ ಜೋಡಿಸಲು ಆಗಲ್ಲ ಅಂದಿದೆ. ಈಗ ಹಾದಿ ತಪ್ಪಿಸಲು ಮೋದಿ 15 ಲಕ್ಷ ಕೊಡ್ತೀನಿ ಅಂದಿದಾರೆ ಅಂತ ಹೇಳ್ತಿದೆ. ಆದರೆ ಮೋದಿ ಎಲ್ಲೂ 15 ಲಕ್ಷ ಕೊಡುವ ಗ್ಯಾರಂಟಿ ಕಾರ್ಡ್ ಕೊಟ್ಟಿಲ್ಲ. ಅವರು ಕಪ್ಪು ಹಣ ತಂದರೆ ಕೊಡ್ತೇವೆ ಅಂತಷ್ಡೇ ಹೇಳಿದ್ದಾರೆ ಎಂದರು.
ನಾವು ಜನರ ಪರ ಇದ್ದೇವೆ, ಗ್ಯಾರಂಟಿ ಜಾರಿಯಾಗದೇ ಇದ್ರೆ ಬಿಜೆಪಿ ಹೋರಾಟ ಮಾಡಲಿದೆ. ಇವತ್ತು ಬೀದಿಯಲ್ಲಿ ನೌಕರರು ಏಟು ತಿನ್ನುವ ಹಾಗೆ ಕಾಂಗ್ರೆಸ್ ಮಾಡಿದೆ. ಮನೆಗಳಲ್ಲಿ ಬೆಂಕಿ ಹತ್ತಿಸಿ ಕಾಂಗ್ರೆಸ್ ಆಟ ಆಡ್ತಿದೆ ಎಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ