ಕಾಸರಗೋಡು, ಜೂ 01(DaijiworldNews/MS): ಬೃಹತ್ ಪ್ರಮಾಣದ ಸ್ಪೋಟಕ ವಸ್ತು ಪತ್ತೆ ಹಚ್ಚಿ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕೆಟ್ಟಂಗಳ್ ನ ಮೊಹಮ್ಮದ್ ಮುಸ್ತಫಾ (೪೨)ನನ್ನು ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಮುಳಿಯಾರು ಪಂಚಾಯತ್ ಕೆಟ್ಟುಂಗಳ್ ನಲ್ಲಿ ಅಬಕಾರಿ ಮತ್ತು ಆದೂರು ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಬೃಹತ್ ಪ್ರಮಾಣದ ಸ್ಪೋಟಕ ವಸ್ತು ಪತ್ತೆ ಹಚ್ಚಿ ಆರೋಪಿ ಮುಸ್ತಫಾನನ್ನು ವಶಕ್ಕೆ ಪಡೆಯಲಾಗಿತ್ತು.
ಕಾರು ಮತ್ತು ಈತನ ಮನೆಯಲ್ಲಿ ತಪಾಸಣೆ ನಡೆಸಿದಾಗ ೨೮೦೦ ಜಿಲಸ್ಟಿನ್ ಸ್ಟಿಕ್ , ದಿಟರ್ನೆಟರ್ ಸೇರಿದಂತೆ ಭಾರೀ ಪ್ರಮಾಣದ ಸ್ಪೋಟಕ ವಸ್ತುಗಳು ಪತ್ತೆಯಾಗಿತ್ತು.
ಸ್ಪೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ನೀಡಿರುವ ಹೇಳಿಕೆಗಳ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು, ಸಮಗ್ರ ತನಿಖೆಗೆ ಒತ್ತಾಯಿಸಲಾಗಿದೆ.