ಕುಂದಾಪುರ, ಮೇ 31 (DaijiworldNews/HR): ಬ್ರಹ್ಮಾವರ ತಾಲೂಕಿನ ಕೋಡಿ ಕನ್ಯಾನದ ಸಮುದ್ರತೀರದಲ್ಲಿ ಮನೆ ಅನಾದಿ ಕಾಲದಿಂದ ಮನೆ ಕಟ್ಟಿ ಕುಳಿತ ಬಡ ಫಲಾನುಭವಿಗಳಿಗೆ ಶೀಘ್ರವೇ ಹಕ್ಕುಪತ್ರ ವಿತರಿಸಲಾಗುವುದು ಎಂದು ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ವಿವಿಧ ಕಾರಣಗಳಿಂದ ಈ ವರೆಗೆ ಹಕ್ಕುಪತ್ರ ಮಂಜೂರಾಗಿರಲಿಲ್ಲ. ಕೋಡಿ ಕನ್ಯಾನ ಮತ್ತು ಹೊಸಬೆಂಗ್ರೆಯ ಜನರ ಭೂಮಿ ಹಕ್ಕಿನ ಕನಸು ಇತ್ತೀಚೆಗೆ ನನಸಾಯಿತು. ಒಟ್ಟು 161 ಕುಟುಂಬಗಳಿಗೆ ಸರಕಾರಿ ಭೂಮಿ ಮಂಜೂರಾತಿ ಆದೇಶ ಆಗಿದೆ. 178ಜನರಿಗೆ ಪರಂಬೋಕು ಜಮೀನು 132. ಜನರಿಗೆ ಸಮುದ್ರ ತೀರ ಎಂದು ನಮೂದಾಗಿದ್ದ ಜಮೀನು ಮಂಜೂರಾಗಲು ಸಚಿವ ಸಂಪುಟದ ಅನುಮೋದನೆ ಬಾಕಿ ಇದೆ. ಅಂದಿನ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಅಂದಿನ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಪ್ರಯತ್ನದಿಂದ ಜಾಗ ಮಂಜೂರಾಗಿದೆ ಎಂದರು.
ಇನ್ನು ಸೆಂಟ್ಗೆ 5 ಸಾವಿರ ರೂ. ಕಟ್ಟಿಸಲಾಗುತ್ತಿದ್ದು ಬಡವರಿಗೆ ಕಷ್ಟವಾಗುತ್ತಿದೆ. ಮಲ್ಪೆಯಲ್ಲಿ ಇಂತಹ ಪ್ರಕರಣದಲ್ಲಿ ಸೆಂಟ್ಗೆ 500 ರೂ. ಕಟ್ಟಿಸಲಾಗಿದ್ದು ಅದೇ ಮಾದರಿಯಲ್ಲಿ ಇಲ್ಲಿಯೂ ಹಣ ಪಾವತಿಗೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.
ಕೋಡಿ ಕನ್ಯಾನ ಮತ್ತು ಹೊಸ ಬೆಂಗ್ರೆ ಜನತೆಯ ಈ ಭೂಮಿ ಹಕ್ಕಿನ ಹಲವು ಬಗ್ಗೆ ದಶಕಗಳಿಂದಲೂ ಮಾದರಿಯಲ್ಲಿ ಹೋರಾಟಗಳು ನಡೆದಿದ್ದವು. - ಎಲ್ಲ ದಾಖಲೆಗಳ ಸಂಗ್ರಹದ ಮೂಲಕ ಹಾಲಾಡಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಂದಾಯ ಅಧಿಕಾರಿಗಳು ಮತ್ತು ಸಿಆರ್ಝಡ್ ಅಧಿಕಾರಿಗಳ ಸಭೆ ನಡೆಸಿ ನಿರಾಕ್ಷೇಪಣ ಪತ್ರ ನೀಡಲಾಗಿದ್ದು, ಕಡತವನ್ನು ಬೆಂಗಳೂರಿಗೆ ಒಯ್ದು ಸಚಿವಾಲಯದ ಹಿಂದೆ ಬಿದ್ದರು. ಅಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಸಚಿವರು ಮತ್ತು ಶಾಸಕರ ಸಮ್ಮುಖದಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರು ಸಭೆ ಕರೆದು ಚರ್ಚಿಸಿ ನೂರಾರು ಕುಟುಂಬಗಳಿಗೆ ಹಕ್ಕುಪತ್ರ ದೊರಕಿಸಲಾಗಿದೆ ಎಂದರು.