ಮಂಗಳೂರು, ಮೇ 30 (DaijiworldNews/SM): ದಾವಣಗೆರೆ ಜಿಲ್ಲೆ ಎಸ್ ಪಿ ಆಗಿ ಇದೀಗ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಡಿ.ಜಿ ಕಚೇರಿಯಲ್ಲಿದ್ದ ಸಿ ಬಿ ರಿಷ್ಯಂತ್ ಅವರನ್ನು ದ.ಕ. ಜಿಲ್ಲೆಗೆ ಪ್ರಭಾರ ಎಸ್.ಪಿ.ಯಾಗಿ ವರ್ಗಾವಣೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಆರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರು ಎಸ್.ಪಿ. ವಿಕ್ರಮ್ ಅಮ್ಟೆ ಅವರು ರಜೆಯಲ್ಲಿರುವ ಕಾರಣ ರಿಷ್ಯಂತ್ ಅವರು ಪ್ರಭಾರವಾಗಿ ಕರ್ತವ್ಯ ಮಾಡಲು ನಾಳೆ ಹಾಜರಾಗಲು ಸರಕಾರ ಅದೇಶ ಹೊರಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಿ ಬಿ ರಿಷ್ಯಂತ್ 2013 ಬ್ಯಾಚ್ ಕರ್ನಾಟಕ ಕೆಡರ್ ಐ ಪಿ ಎಸ್ ಅಧಿಕಾರಿಯಾಗಿದ್ದಾರೆ. ಮೂಲತಃ ಬೆಂಗಳೂರಿನ ನಿವಾಸಿಯಾಗಿರುವ ಇವರು, ಮಂಗಳೂರಿನಲ್ಲಿ ಎ ಎಸ್ ಪಿ, ಬಾಗಲಕೋಟೆ ನಲ್ಲಿ ಎಸ್ ಪಿ ಯಾಗಿ, ದಾವಣಗೆರೆಯಲ್ಲಿ ಎಸ್.ಪಿ.ಯಾಗಿ ಕರ್ತವ್ಯ ಮಾಡಿದ್ದಾರೆ.
ಇವರು ಈ ಹಿಂದೆ ಮೈಸೂರು ಜಿಲ್ಲಾ ವರಿಷ್ಠಾಧಿಕಾರಿಗಳಾಗಿದ್ದರು. ಮೈಸೂರಿನಲ್ಲಿ ಖಡಕ್ ಪೋಲಿಸ್ ಅಧಿಕಾರಿ ಎಂದು ಹೆಸರು ಕೂಡ ಪಡೆದಿದ್ದಾರೆ. ಪ್ರಭಾವಿ ನಾಯಕ ಮುನಿರತ್ನ ಅವರ ಅಳಿಯನಾಗಿರುವ ಇವರನ್ನು ಚುನಾವಣಾ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯಿಂದ ಯಾವುದೇ ಸ್ಥಳ ನೀಡದೆ ವರ್ಗಾವಣೆಗೊಳಿಸಿ ಬಳಿಕ ಬೆಂಗಳೂರು ಡಿ.ಜಿ.ಕಚೇರಿಯಲ್ಲಿ ಕರ್ತವ್ಯಕ್ಕೆ ಸೂಚಿಸಿದ್ದರು. ಇದೀಗ ಮಂಗಳೂರು ಜಿಲ್ಲಾ ಪ್ರಭಾರ ಎಸ್.ಪಿ.ಯಾಗಿ ಸರಕಾರ ಅದೇಶ ಹೊರಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.