ಕಾಸರಗೋಡು, ಮೇ 29 (DaijiworldNews/SM): ನ್ಯಾಯಾಲಯಕ್ಕೆ ಹಾಜರು ಪಡಿಸಲು ಕರೆದೊಯ್ಯುತ್ತಿದ್ದಾಗ ಪೊಲೀಸರಿಂದ ತಪ್ಪಿಸಿ ಪರಾರಿಯಾಗಿದ್ದ ಉಪ್ಪಳ ನಿವಾಸಿಯಾದ ಆರೋಪಿಯೋರ್ವ ನನ್ನು 25 ವರ್ಷ ಗಳ ಬಳಿಕ ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಉಪ್ಪಳ ಮಣಿ ಮುಂಡ ದ ಉಸ್ಮಾನ್ ಪುಯಕ್ಕರೆ (56) ಬಂಧಿತ. 25 ವರ್ಷಗಳ ಹಿಂದೆ ತಳಿಪರಂಬ ಪೇಟೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆ ಯಿಂದ ಚಿನ್ನಾ ಭರಣ ಎಗರಿಸಿದ ಪ್ರಕರಣ ಆರೋಪಿಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತಳಿ ಪರಂಬ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲು ಕೊಂಡೊಯ್ಯು ತ್ತಿದ್ದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿ ಪರಾರಿ ಯಾಗಿದ್ದನು. ಪೊಲೀಸರು ಈತನಿಗಾಗಿ ಕೇರಳ, ಕರ್ನಾಟಕ, ತಮಿಳುನಾಡು ಮೊದಲಾದೆಡೆಗಳಲ್ಲಿ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಬಳಿಕ ತನಿಖೆ ಸ್ಥಗಿತ ಗೊಂಡಿತ್ತು.ಈ ನಡುವೆ ಕಣ್ಣೂರು ಕ್ರೈಮ್ ಬ್ರಾಂಚ್ ಪೊಲೀಸರು ತಲೆಮರೆಸಿ ಕೊಂಡಿರುವ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ತನಿಖೆ ಪುನರಾರಂಭಿಸಿ ದ್ದು, ಉಸ್ಮಾನ್ ಪತ್ತೆಗೆ ಮಂಜೇಶ್ವರ ಪೊಲೀಸರ ನೆರವು ಕೋರಿ ದ್ದರು. ಈ ನಡುವೆ ಮಂಜೇಶ್ವರ ಕೆದಂಬಾಡಿ ಎಂಬಲ್ಲಿ ನ ಮನೆಯಲ್ಲಿ ರುವ ಬಗ್ಗೆ ಲಭಿಸಿದ ಖಚಿತ ಮಾಹಿತಿಯಂತೆ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯು ಕೇರಳ ಹಾಗೂ ಕರ್ನಾಟಕದ ಹಲವೆಡೆ ಗಳಲ್ಲಿ ಹೋಟೆಲ್ ಕೆಲಸ ನಿರ್ವ ಹಿಸಿದ್ದು, ಕೆಲ ತಿಂಗಳ ಹಿಂದೆ ಉಪ್ಪಳನ್ ಪರಿಸರದ ಹೋಟೆಲ್ ವೊಂದರಲ್ಲಿ ಕೆಲಸ ನಿರ್ವಹಿಸಿದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಆರೋಪಿಯನ್ನು ಮಂಜೇಶ್ವರ ಪೊಲೀಸರು ತಳಿಪರಂಬ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ