ಉಡುಪಿ, ಮೇ 29 (DaijiworldNews/HR): ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸ್ ಸಮಸ್ಯೆ ಸರಿಪಡಿಸುವಂತೆ ರೋಗಿಗಳಿಂದ ಪ್ರತಿಭಟನೆ ಸೋಮವಾರದಂದು ಆಸ್ಪತ್ರೆಯ ವಠಾರದಲ್ಲಿ ನಡೆಯಿತು.
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸ್ ಸಮಸ್ಯೆ ಸರಿಪಡಿಸುವಂತೆ ರೋಗಿಗಳಿಂದ ಸೋಮವಾರದಂದು ಆಸ್ಪತ್ರೆಯ ವಠಾರದಲ್ಲಿ ರೋಗಿಗಳು ಸಮಸ್ಯೆಯನ್ನು ಸರಿಪಡಿಸುವಂತೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.
ವಿಷಯ ತಿಳಿದ ನೂತನ ಶಾಸಕರಾದ ಯಶಪಾಲ್ ಸುವರ್ಣ ಹಾಗೂ ಕಾಂಗ್ರೆಸ್ ಮುಖಂಡರಾದ ಕೆ ಕೃಷ್ಣಮೂರ್ತಿ ಆಚಾರ್ಯ ಜಿಲ್ಲಸ್ಪತ್ರೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದವುದರೊಂದಿಗೆ ಸಮಸ್ಯೆಗಳನ್ನ ಪರಿಹರಿಸುತ್ತೆವೆಂದು ರೋಗಿಗಳಿಗೆ ಭರವಸೆಯನ್ನು ನೀಡಿದರು.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಯಶಪಾಲ್ ಸುವರ್ಣ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೆನೆ ಈಗಾಗಲೇ ಸಂಜೀವಿನಿ ಎಂಬ ಏಜೆನ್ಸಿಗೆ ಸರಕಾರ 120 ಕಡೆ ಗುತ್ತಿಗೆ ನೀಡಿದ್ದ್ದು ಇದರ ಸಮಸ್ಯೆಯಿಂದ ರೋಗಿಗಳು ಕಷ್ಟಪಡುತ್ತಿದ್ದಾರೆ. ಜಿಲ್ಲಾಧಿಕಾರಿ, ಸರಕಾರ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಕೂಡಲೇ ಪರಿಹರಿಸರಬೇಕು ಎಂದು ಮನವಿಯನ್ನು ಮಾಡಿಕೊಂಡಿದ್ದೆನೆ.ಸರಕಾರ ಕೂಡಲೇ ಪರಿಹರಿಸದಿದ್ದರೆ ಖಾಸಗಿಯವರ ಸಹಕಾರ ಪಡೆದು ಈ ಸಮಸ್ಯೆಯನ್ನು ಬಗೆಹರಿಸುತ್ತೆವೆ ಎಂದರು.
ಇನ್ನು ಡಯಾಲಿಸಿಸ್ ರೋಗಿಯೊರ್ವರಾದ ಪ್ರೆಮಾ ಅವರು ಮಾಧ್ಯದವರ ಜೊತೆ ಮಾತನಾಡಿ ಸತತ 6 ವರ್ಷಗಳಿಂದ ಡಯಾಲಿಸಿಸ್ ಮಾಡುತ್ತಾ ಬಂದಿದ್ದು ಇವಾಗ ಖಾಸಗಿಯವರ ಬಳಿ ಡಯಾಲಿಸಿಸ್ ಮಾಡಿದ್ದು ಇಲ್ಲಿ ರಕ್ತ ಕ್ಲಿಲಿಯರೆನ್ಸ್ ಇಲ್ಲ, ನೀರು ಹೋಗುವುದಿಲ್ಲ, ಡಯಾಲಿಸಿಸ್ ಆರಂಭವಾದ ಒಂದುಗಂಟೆಗಳ ನಂತರ ಅನೇಕ ಸಮಸ್ಯೆಗಳು ಎದುರಾಗುತ್ತವೆ ಎಂದರು.