ಮಂಗಳೂರು, ಮಾ 30(MSP): ಅರಬ್ಭಿಗಳ ಭಾಷೆಯೇ ನಮಗರ್ಥವಾಗುದಿಲ್ಲ, ಇನ್ನು ಅವರು ನಮ್ಮ ತುಳು ಚಿತ್ರ ಹಾಡನ್ನು ಹಾಡುವುದುಂಟೇ ಎಂದು ಪ್ರಶ್ನಿಸೋದು ಸಹಜ. ಅದರೆ ಸಂಗೀತಕ್ಕೆ ಆ ಶಕ್ತಿ ಇದೆ. ಯಾಕೆಂದರೆ ದೇಶ ಭಾಷೆಗಳ ಗಡಿಯನ್ನು ಮೀರಿ ಬೆಳೆಯುವ ಶಕ್ತಿ ಸಂಗೀತಕ್ಕಿದೆ. ಇದೇ ಕಾರಣಕ್ಕೆ ಕರಾವಳಿಯ ಎವರ್ ಗ್ರೀನ್ ಸೂಪರ್ ಹಿಟ್ ತುಳು ಸಿನೆಮಾದ ಗೀತೆಯೊಂದು ಅರಬ್ಭಿ ಗಾಯಕನ ಕಂಠಸಿರಿಯಲ್ಲಿ ಮೂಡಿಬಂದಿದೆ.
ತುಳುನಾಡೇ ಫಿದಾ ಆಗಿರುವಂತೆ ಹಾಡಿರೋದು ಕುವೈಟ್ನ ಖ್ಯಾತ ಹಾಡುಗಾರ ಮುಬಾರಕ್ ಅಲ್ ರಶೀದ್ ಎಂಬವರು. ತುಳು ಕೂಟ ಕುವೈಟ್ ಆಯೋಜಿಸಿದ ರಸಮಂಜರಿ ಕಾರ್ಯಕ್ರಮದಲ್ಲಿ ಪಗೆತ ಪುಗೆ ಚಲನಚಿತ್ರದ ‘ಮೋಕೆದ ಸಿಂಗಾರಿ, ಉಂತುದೆ ಬಂಗಾರಿ’ ಎನ್ನುವ ಹಾಡನ್ನು ಹಾಡುವ ಮೂಲಕ ಮುಬಾರಕ್ ಅಚ್ಚರಿ ಮೂಡಿಸಿದರು. ಅಷ್ಟೇ ಅಲ್ಲ ಇದೇ ಹಾಡನ್ನು ತಮ್ಮ ಅರೇಬಿಕ್ ಭಾಷೆಯಲ್ಲೂ ಹಾಡುವ ಮೂಲಕ ನೆರೆದಿದ್ದವರ ಮನರಂಜಿಸಿದರು.
ಇದೀಗ ಈ ಹಾಡು ತುಳುನಾಡಿನಾದ್ಯಂತ ವೈರಲ್ ಆಗುತ್ತಿದೆ.