ಮಂಗಳೂರು, ಮೇ 28 (DaijiworldNews/HR): ಹಯಾತುಲ್ ಇಸ್ಲಾಂ ಬದ್ರಿಯ ಜುಮ್ಮಾ ಮಸೀದಿ ಮತ್ತು ಮದರಸ ಎದುರುಪದವು ಮೂಡುಶೆಡ್ಡೆ ಇದರ 2022-23 ನೇ ಸಾಲಿನ ವಾರ್ಷಿಕ ಮಹಾ ಸಭೆಯು ಮಸೀದಿ ಅಧ್ಯಕ್ಷ ಮಯ್ಯೆದ್ದಿ ಅವರ ಅಧ್ಯಕ್ಷತೆಯಲ್ಲಿ ಮಹಮ್ಮದ್ ಮುಕ್ರಿ ಅವರ ಗೌರವ ಅಧ್ಯಕ್ಷತೆಯಲ್ಲಿ ಮದರಸ ಸಭಾಂಗಣದಲ್ಲಿ ನೆರವೇರಿತು.
ಸಭೆಯನ್ನು ಹಯಾತುಲ್ ಇಸ್ಲಾಂ ಬದ್ರಿಯ ಜುಮ್ಮಾ ಮಸೀದಿ ಖತೀಬರಾದ ಸಫ್ವಾನ್ ಇರ್ಫಾನಿ ಮುಂಡೋಳೆ ದುಆದೊಂದಿಗೆ ಉದ್ಘಾಟಿಸಿದ್ದು, ಸಭೆಯಲ್ಲಿ ವಾರ್ಷಿಕ ವರದಿಯನ್ನು ಜೊತೆ ಕಾರ್ಯದರ್ಶಿ ಮಹಮ್ಮದ್ ಆರೀಫ್ ಮಂಡಿಸಿದ್ದರು, ವಾರ್ಷಿಕ ಲೆಕ್ಕಪತ್ರವನ್ನು ಅಹಮ್ಮದ್ ಬಾವ ಮಂಡಿಸಿದ್ದರು.
ಇನ್ನು ಈ ಬಾರಿ ಮಸೀದಿ ಆಡಳಿತವನ್ನು ಈ ಹಿಂದಿನ ಅಧ್ಯಕ್ಷರಾದ ಮಯ್ಯೆದ್ದಿ ಅವರೆ ಎರಡನೇ ಅವಧಿಗೆ ಮುಂದುವರಿಸುವಂತೆ ಜಮಾತಿಗರು ಸೂಚಿಸಲಾಯಿತು. ಅದರಂತೆ 2023-24 ನೇ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷರಾಗಿ ಮಯ್ಯೆದ್ದಿ, ಉಪಾಧ್ಯಕ್ಷರಾಗಿ ಇಕ್ಬಾಲ್ ಎ.ಪಿ, ಕಾರ್ಯದರ್ಶಿಯಾಗಿ ಅಹಮ್ಮದ್ ಬಾವ, ಜೊತೆ ಕಾರ್ಯದರ್ಶಿಯಾಗಿ ಮಹಮ್ಮದ್ ಆರೀಫ್, ಕೋಶಾಧಿಕಾರಿಯಾಗಿ ಮನ್ಸೂರ್, ಸದಸ್ಯರುಗಳಾಗಿ ಸುಲೈಮಾನ್, ಸಾಜುದ್ದೀನ್, ಸಿರಾಜ್ ಮೋನು, ರಝಾಕ್ ಮಂದಾರ, ಮಹಮ್ಮದ್ ಇಕ್ಬಾಲ್ ಸಿ.ಎಚ್, ಶಾಕೀರ್, ಸೈಫುದ್ದೀನ್, ಶೇಖ್ ಮೋನು ಆಯ್ಕೆಯಾಗಿದ್ದಾರೆ.
ಈ ವೇಳೆ ಹಯಾತುಲ್ ಇಸ್ಲಾಂ ಬದ್ರಿಯ ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷ ಹಾಜಿ ಮಹಮ್ಮದ್ ಹನೀಫ್, ಮಾಜಿ ಅಧ್ಯಕ್ಷ ಎಸ್ ಆಲಿಯಬ್ಬ, ಮಹಮ್ಮದ್ ಶರೀಫ್, ಹಿರಿಯರಾದ ಹಾಜಿ ಹನೀಫ್ ಮೌಲಾವಿ ಮತ್ತಿತರರು ಉಪಸ್ಥಿತರಿದ್ದರು.