ಮಂಗಳೂರು, ಮೇ 27(DaijiworldNews/HR): ದೇಶದೆಲ್ಲೆಡೆ ಮನೆ ಮಾತಾಗಿರುವ ವಿದ್ಯಾ ಕಾಫಿಯ ಡಿಸ್ಟ್ರಿಬ್ಯೂಟಿಂಗ್ ಸಂಸ್ಥೆ ಆದಿ ಎಂಟರ್ ಪ್ರೈಸಸ್ ಮಂಗಳೂರಿನ ಬಿಜೈನಲ್ಲಿ ಶನಿವಾರ ಶುಭಾರಂಭಗೊಂಡಿತು.
ಕಾಫಿ ತೋಟಗಳಿಂದ ಅದೇ ತಾಜಾತನದೊಂದಿಗೆ ರುಚಿ ಆಹ್ಲಾದತೆಯ ಜೊತೆಗೆ ನೇರವಾಗಿ ಕಪ್ ಗೆ ಎಂಬ ಧ್ಯೇಯ ವಾಕ್ಯದೊಂದಿಗೆ ಎಲ್ಲೆಡೆ ಜನಜನಿತವಾಗಿರುವ ವಿದ್ಯಾ ಕಾಫಿ ಇದೀಗ ಕರಾವಳಿಯಲ್ಲಿ ತನ್ನ ಶಾಖೆಯನ್ನು ತೆರೆದಿದೆ.
ನಗರದ ಬಿಜೈ ಚರ್ಚ್ ಬಳಿಯ ನಾರ್ದನ್ ಸ್ಕೈ ಫಾಮ್ ಸ್ಟ್ರೀಕ್ ನ ಎದುರುಗಡೆ ಆದಿ ಎಂಟರ್ ಪ್ರೈಸಸ್ ಸಂಸ್ಥೆಯು ಶನಿವಾರ ಶುಭಾರಂಭಗೊಂಡಿದ್ದು, ವಿದ್ಯಾ ಹರ್ಬ್ಸ್ ಪ್ರೈವೆಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕರಾದ ಶ್ಯಾಂ ಪ್ರಸಾದ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಅತ್ಯುತ್ತಮ ಗುಣಮಟ್ಟ ಹಾಗೂ ಚಹಾ ಪುಡಿಯನ್ನು ಮಂಗಳೂರಿಗೆ ನೀಡುವ ಉದ್ದೇಶದಿಂದ ಆದಿ ಎಂಟರ್ ಪ್ರೈಸಸ್ ಸಂಕಲ್ಪವನ್ನು ಮಾಡಿದ್ದು, ಖಂಡಿತವಾಗಿಯೂ ವಿದ್ಯಾ ಕಾಫಿ ಮಂಗಳೂರಿಗರ ಮನ ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಅತಿಥಿಯಾಗಿ ಆಗಮಿಸಿದ್ದ ಯಮುನಾ ಹೋಮ್ಸ್ ಆಂಡ್ ಡಿಸೈನ್ ಪ್ರೈವೆಟ್ ಲಿಮಿಟೆಡ್’ನ ಪುರುಶೋತ್ತಮ್ ಶೆಟ್ಟಿಯವರು ಆದಿ ಎಂಟರ್ ಪ್ರೈಸಸ್ ನವರಿಂದ ಹಂಚಿಕೆಯಾಗುವ ವಿದ್ಯಾ ಕಾಫಿ ಪ್ರತಿ ಮನೆಯನ್ನು ತಲುಪಿ ಮಂಗಳೂರಿಗರಿಗೆ ಹರ್ಷೋಲ್ಲಾಸ ನೀಡಲಿದೆ ಎಂದು ಸಂಸ್ಥೆಗೆ ಶುಭಹಾರೈಸಿದರು.
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ನ್ಯೂರೋಲಜಿ ವಿಭಾಗದ ಮುಖ್ಯಸ್ಥರಾದ ಡಾ. ರಾಘವೇಂದ್ರ ಬಿ.ಎಸ್. ಅತಿಥಿಯಾಗಿ ಭಾಗವಹಿಸಿದ್ದರು.
ಇನ್ನು ಚಿಕ್ಕಮಗಳೂರು ಮತ್ತು ಕೊಡಗಿನ ತೋಟಗಳಲ್ಲಿ ಬೆಳೆದ ತಾಜಾ ರುಚಿಯ ಕಾಫಿ ಹಾಗೂ ಚಾ ಹುಡಿಯು ಕರಾವಳಿಯ ಮನೆ ಮನಗಳಿಗೆ ವಿದ್ಯಾ ಇನ್ಟಾ ಕಾಫಿ, ವಿದ್ಯಾ ಪಿಲ್ಟರ್ ಕಾಫಿ ಮತ್ತು ವಿದ್ಯಾ ಯುನಿಕ್ ಟಿ ಪೌಡರ್ ಎಂಬ ಉತ್ಪನ್ನಗಳ ಮೂಲಕ ಪರಿಚಯಿಸುತ್ತದೆ. ಅತ್ಯಂತ ಕಡಿಮೆ ದರದಲ್ಲಿ ಉತ್ಕ್ರಷ್ಟ ಉತ್ಪನ್ನಗಳು ಇದೀಗ ಪ್ಲಾಂಟಿನಿಂದ ನೇರವಾಗಿ ಗ್ರಾಹಕರನ್ನು ತಲುಪಿಸುವ ಕೆಲಸವನ್ನು ಆದಿ ಎಂಟರ್ಪ್ರೈಸಸ್ ಮಾಡಲಿದೆ.