ಉಡುಪಿ, ಮೇ 27(DaijiworldNews/HR): ಆದಿ ಉಡುಪಿಯ ಮನೆಯಿಂದ ಹೆರಿಗೆಗೆಂದು ಆಸ್ಪತ್ರೆಗೆ ಹೋಗುತ್ತಿದ್ದ ಮಹಿಳೆ 108 ಆಂಬ್ಯುಲೆನ್ಸ್ ನೊಳಗೆ ಗಂಡು ಮಗುವೊಂದಕ್ಕೆ ಜನ್ಮ ನೀಡಿದ್ದಾರೆ.
ಸರೋಜಾ (28) ಜನ್ಮ ನೀಡಿದ ಗರ್ಭವತಿ.
ಆಂಬುಲೆನ್ಸ್ ನೊಳಗೆ ಸರೋಜಾ ಅವರಿಗೆ ಹೆರಿಗೆ ವೇದನೆ ಹೆಚ್ಚಾಗಿ ಕಾಣಿಸಿಕೊಂಡಿತು.
ಕೆಲ ಹೊತ್ತಿನಲ್ಲಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು.
ಇನ್ನು ಸಹಾಯಕರಾದ 108 ಚಾಲಕರು ಸುರಕ್ಷಿತವಾಗಿ ಹೆರಿಗೆ ಮಾಡಿಸಿ ಬಾಣಂತಿ ಮತ್ತು ನವಜಾತ ಶಿಶುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಇಬ್ಬರು ಆರೋಗ್ಯವಂತರಾಗಿದ್ದಾರೆಂದು ಆಸ್ಪತ್ರೆಯ ವೈದ್ಯಧಿಕಾರಿ ಮೂಲಗಳಿಂದ ತಿಳಿದುಬಂದಿದೆ.