ಮಂಗಳೂರು, ಮೇ 26(DaijiworldNews/MS): ಕೋಚಿಂಗ್ ಸೆಂಟರ್ ಗಳ ನೋಂದಣಿ ಕಡ್ಡಾಯಎಂದು ಪೂರ್ವ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಸಾಂದರ್ಭಿಕ ಚಿತ್ರ
ಕರ್ನಾಟಕ ಟ್ಯುಟೋರಿಯಲ್ ಇನ್ಸ್ಟಿಟ್ಯೂಷನ್ಸ್ (ನೋಂದಣಿ ಮತ್ತು ನಿಯಂತ್ರಣ) ನಿಯಮಗಳು 2001ರಡಿ ಕೋಚಿಂಗ್ ಸೆಂಟರ್ಗಳನ್ನು ನೋಂದಾಯಿಸಿಕೊಳ್ಳುವ ಮತ್ತು ಕೋಚಿಂಗ್ ಸೆಂಟರ್ಗಳನ್ನು ನಡೆಸುತ್ತಿರುವ ಹಾಗೂ ನಡೆಸಲು ಉದ್ದೇಶಿಸಿದ ಸಂಸ್ಥೆಗಳು ಕೋಚಿಂಗ್ ಸೆಂಟರ್ ತೆರೆಯಲು ನೋಂದಣಿ ಶುಲ್ಕ 25,000 ರೂ. ಗಳನ್ನು ನಿಯಮದಂತೆ ಪಾವತಿಸಬೇಕು. ಎಂದು ಹೇಳಿದೆ.
ಹೆಚ್ಚಿನ ಮಾಹಿತಿಗೆ ಉಪನಿರ್ದೇಶಕರ ಕಚೇರಿ, ಪದವಿ ಪೂರ್ವ ಶಿಕ್ಷಣ ಇಲಾಖೆ ರಥಬೀದಿ, ಮಂಗಳೂರು ಇಲ್ಲಿಗೆ ಸಂಪರ್ಕಿಸಬಹುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.