ಮಂಗಳೂರು, ಮೇ 25 (DaijiworldNews/SM): ಸಿದ್ದರಾಮಯ್ಯ ವಿರುದ್ಧ ಕೊಲೆ ಆರೋಪ ಮಾಡಿದ್ದ ಹರೀಶ್ ಪೂಂಜ ವಿರುದ್ಧ ಮಂಗಳೂರಿನಲ್ಲಿ ದೂರು ದಾಖಲಾಗಿದೆ. ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿಯವರು ಐಜಿಗೆ ದೂರು ನೀಡಿದ್ದಾರೆ.
ಶಾಸಕ ಹರೀಶ್ ಪೂಂಜ ಹೇಳಿಕೆಯನ್ನು ಖಂಡಿಸುತ್ತೇವೆ. ಬಿಜೆಪಿ ಶಾಸಕರಿಗೆ ಅಭ್ಯಾಸ ಆಗಿದೆ ಯಾರನ್ನ ಬೇಕಾದರೂ ಹುಟ್ಟಿಸುತ್ತಾರೆ. ಯಾರನ್ನ ಬೇಕಾದರೂ ಸಾಯಿಸುತ್ತಾರೆ, ಇದು ರೂಢಿಯಾಗಿ ಹೋಗಿದೆ. ಈ ಹಿಂದೆ ಉರಿ ಗೌಡ ಹಾಗೂ ನಂಜೇಗೌಡರನ್ನ ಹುಟ್ಟಿಸಿದ್ರು ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದೆ ಹರೀಶ್ ಪೂಂಜ ಓರ್ವ ಮಹಿಳೆಗೆ ಮೊಟ್ಟೆ ಎಸೆದು ಅವಮಾನ ಮಾಡಿದ್ದರು. ಶಾಸಕರು ಜಿಲ್ಲೆಯಾದ್ಯಂತ ದ್ವೇಷ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಮುಸಲ್ಮಾನರ ವೋಟ್ ಬೇಡ ಎಂದು ಹೇಳುತ್ತಾರೆ. ಆದರೆ, ಇದೇ ಪೂಂಜ ತಮ್ಮ ಗ್ಯಾಸ್ ಏಜೆನ್ಸಿಯನ್ನು ಮುಸಲ್ಮಾನ ವ್ಯಕ್ತಿಗೆ ಮಾರಿದ್ದಾರೆ.
ವೋಟ್ ಬೇಡ ಎಂದು ಮಸೀದಿಗಳಿಗೆ ಅತೀ ಹೆಚ್ಚಿನ ಅನುದಾನ ನೀಡುತ್ತಾರೆ. ಇಂತಹ ಶಾಸಕರನ್ನು ಏನು ಮಾಡಬೇಕು ಎಂದು ಜನತೆ ಅರ್ಥ ಮಾಡಿಕೊಳ್ಳಬೇಕು ಎಂದು ಮಂಗಳೂರಿನಲ್ಲಿ ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ವಾಗ್ದಾಳಿ ನಡೆಸಿದ್ದಾರೆ.