ಉಚ್ಚಿಲ, ಮೇ 25 (DaijiworldNews/SM): ಇಲ್ಲಿನ ಬಡಾ ಗ್ರಾಮ ಪಂಚಾಯತಿಯ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಗುರುವಾರ ಮಧ್ಯಾಹ್ನ4 ಗಂಟೆಯ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿ 8 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳು ಬೆಂಕಿಗೆ ಆಹುತಿಯಾಗಿದೆ.
ಪ್ಯಾಡ್ ಬರ್ನರ್ ಮತ್ತು ಪ್ಲಾಸ್ಟಿಕ್ ಮೋಲ್ಡಿಂಡಿಗ್ ಯಂತ್ರಗಳ ಮೌಲ್ಯ ಸುಮಾರು ೪ ಲಕ್ಷದ ೬೦ ಸಾವಿರ ಎಂದು ಪಿಡಿಓ ಸತೀಶ್ ಹೇಳಿದ್ದಾರೆ.
ಅಂತೆಯೇ ಕಟ್ಟಡ ಇನ್ನಿತರ ಪರಿಕರಗಳು ಸೇರಿ 8 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತು ಬೆಂಕಿಗೆ ಆಹುತಿಯಾಗಿದೆ ಎಂದು ಪಿಡಿಓ ಸತೀಷ್ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿಯನ್ನು ನಂದಿಸಿದ್ದಾರೆ.