ಕಾಸರಗೋಡು, ಮೇ 25(DaijiworldNews/MS): ಯುವತಿಯೋರ್ವಳು ಮನೆಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಅಡೂರಿನಲ್ಲಿ ನಡೆದಿದೆ. ಅಡೂರು ಚಾಮಕೊಚ್ಚಿ ಅನ್ನಪ್ಪಾಡಿಯ ಮುದ್ದ ನಾಯ್ಕ್ ರವರ ಪುತ್ರಿ ದಿವ್ಯಾ (26) ಮೃತಪಟ್ಟವರು.
ಬುಧವಾರದಂದು ಮನೆಯ ಕೋಣೆಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಂದಡ್ಕದ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ದಿವ್ಯಾ ಮಂಗಳವಾರ ರಾತ್ರಿ ಕೆಲಸ ಮುಗಿಸಿ ಬುಧವಾರ ಬೆಳಿಗ್ಗೆ ಮನೆಗೆ ಬಂದಿದ್ದರು.
ತಾಯಿ ಹಾಗೂ ಮನೆ ಮಂದಿ ಹೊರಗಡೆ ತೆರಳಿದ್ದ ಸಂದರ್ಭದಲ್ಲಿ ಕೃತ್ಯ ನಡೆದಿದೆ. ಸಂಜೆ ಸ್ಥಳೀಯರು ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಆಗಲೇ ಮೃತ ಪಟ್ಟಿದ್ದರು. ದಿವ್ಯಾಳ ಆತ್ಮಹತ್ಯೆ ಪತ್ರ ಲಭಿಸಿದ್ದು ಪೊಲೀಸರಿಗೆ ಲಭಿಸಿದ ಮಾಹಿತಿಯಂತೆ ಯುವಕನೋರ್ವನ ಕೇಂದ್ರೀಕರಿಸಿ ಆದೂರು ಪೊಲೀಸರು ತನಿಖೆ ಅರಂಭಿಸದ್ದಾರೆ. ಯುವಕ ನಿರಂತರವಾಗಿ ಮೊಬೈಲ್ ನಲ್ಲಿ ಕಿರುಕುಳ ನೀಡುತ್ತಿದ್ದನೆನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821