ಕಾಸರಗೋಡು, ಮೇ 25(DaijiworldNews/MS): ಎರಡನೇ ವಿವಾಹವಾಗಿದ್ದ ದಂಪತಿಗಳು ಮೂವರು ಮಕ್ಕಳನ್ನು ಕೊಲೆಗೈದು ಆತ್ಮಹತ್ಯೆಗೈದ ಘಟನೆ ಕಣ್ಣೂರು ಚೆರುಪುಳದಲ್ಲಿ ನಡೆದಿದೆ. ಚೆರುಪುಳ ನಿವಾಸಿ ಶಾಜಿ(42), ಆತನ ಎರಡನೇ ಚೆರುವತ್ತೂರು ಮೂಲದ ಪತ್ನಿ ಶ್ರೀಜಾ(38), ಮತ್ತು ಆಕೆಯ ಮಕ್ಕಳಾದ ಸೂರಜ್(10), ಸುರಭಿ(8), ಸುಜಿನ್(12) ಸಾವಿಗೀಡಾದರು. ಮನೆಯೊಳಗೆ ಆತ್ಮಹತ್ಯೆ ಎಂದು ಬರೆದ ಪತ್ರವೊಂದು ಪೊಲೀಸರು ಪತ್ತೆಹಚ್ಚಿದ್ದಾರೆ.
ಮೂವರು ಮಕ್ಕಳನ್ನು ಕೊಲೆಗೈದ ಬಳಿಕ ಶಾಜಿ ಮತ್ತು ಶ್ರೀಜ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಮೂವರು ಮಕ್ಕಳು ಮನೆಯ ಮೆಟ್ಟಿಲ ಬಳಿ ನೇಣು ಬಿಗಿದ ಸ್ಥಿತಿಯಲ್ಲೂ, ಶಾಜಿ ಮತ್ತು ಶ್ರೀಜ ಒಂದೇ ಹಗ್ಗದಲ್ಲಿಶ್ರೀಜಾ ಮತ್ತು ಆಕೆಯ ಪತಿ ಫ್ಯಾನ್ಗೆ ನೇಣು ಬಿಗಿದುಕೊಂಡಿದ್ದು ಆತ್ಮಹತ್ಯೆಗೈದಿದ್ದಾರೆ.
ಮಕ್ಕಳ ಶವಗಳು ಹೊರಭಾಗದಲ್ಲಿ ಸಿಕ್ಕ ಬಳಿಕ ಪೊಲೀಸರು ಮನೆಯನ್ನು ತೆರೆಯಲು ಪ್ರಯತ್ನಿಸಿದ್ದಾರೆ. ಆದರೆ, ಒಳಗಿನಿಂದ ಬೀಗ ಹಾಕಲಾಗಿತ್ತು. ಪೊಲೀಸರು ಬಾಗಿಲು ಮುರಿದು ಒಳಪ್ರವೇಶಿಸಿದ್ದು, ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡುಬಂದಿದೆ.
2 ವಾರಗಳ ಹಿಂದಷ್ಟೇ ಮದುವೆಯಾಗಿದ್ದ ಜೋಡಿ: ಮೃತಪಟ್ಟ ಶ್ರೀಜಾ ಮತ್ತು ಶಾಜಿ ದಂಪತಿ ಎರಡು ವಾರಗಳ ಹಿಂದಷ್ಟೇ ಮದುವೆಯಾಗಿದ್ದರು. ಇಬ್ಬರಿಗೂ ಇದು ಎರಡನೇ ಮದುವೆ. ಮಕ್ಕಳಾದ ಸೂರಜ್, ಸುರಭಿ ಮತ್ತು ಸುಬಿತ್ ಶ್ರೀಜಾ ಅವರ ಮೊದಲ ಗಂಡನ ಮಕ್ಕಳಾಗಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದಿಲ್ಲವಾದರೂ, ಕುಟುಂಬ ಕಲಹ ಇದಕ್ಕೆ ಕಾರಣವಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821