ಬಂಟ್ವಾಳ, ಮೇ 24 (DaijiworldNews/SM): ಮಾಣಿಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕಾಂಗ್ರೇಸ್ ಕಾರ್ಯಕರ್ತ ಎಂದು ಹೇಳಲಾದ ವ್ಯಕ್ತಿಯೊಬ್ಬ ತನ್ನ ಗೆಳೆಯನ ಜೊತೆ ನಡೆಸುತ್ತಿದ್ದ ಸಂಭಾಷಣೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಹಲ್ಲೆ ಮಾಡಿದವರು ಮಾಣಿ ನಾಗು ಸಹೋದರ ರಾಕು ಮತ್ತು ತಂಡ ಎಂದು ಪೋನ್ ನಲ್ಲಿ ಹೇಳಿರುವುದು ದಾಖಲಾಗಿದೆ.
ಬಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಗುಂಪೊಂದು ಹಲ್ಲೆ ಮಾಡಿದ ಘಟನೆ ಬಂಟ್ವಾಳದ ಮಾಣಿ ಎಂಬಲ್ಲಿ ನಡೆದಿತ್ತು. ಮಾಣಿ ಜಂಕ್ಸನ್ ನಲ್ಲಿ ಆಕ್ಟೀವಾದಲ್ಲಿ ಹೋಗುತ್ತಿದ್ದ ವೇಳೆ ಓಮ್ನಿ ಕಾರಿನಲ್ಲಿ ಬಂದ ತಂಡ ಸ್ಕೂಟರ್’ಗೆ ಡಿಕ್ಕಿ ಹೊಡೆದು ಬಳಿಕ ಕಾರಿನಿಂದ ಇಳಿದ ತಂಡ ಮಾರಣಾಂತಿಕ ವಾಗಿ ಹಲ್ಲೆ ನಡೆಸಿದೆ ಎಂದು ವಿಟ್ಲ ಪೋಲೀಸ್ ಠಾಣೆಗೆ ದೂರು ನೀಡಲಾಗಿತ್ತು, ಇದೀಗ ಕಾಂಗ್ರೇಸ್ ಕಾರ್ಯಕರ್ತನೊಬ್ಬ ತನ್ನ ಗೆಳೆಯನ ಜೊತೆ ಪೋನ್ ನಲ್ಲಿ ಮಾತನಾಡುತ್ತಿದ್ದ ವಿಡಿಯೋ ವೈರಲ್ ಆಗಿದೆ.
ಅದರಲ್ಲಿ ಆತ ನನಗೆ ಗಲಾಟೆ ವಿಷಯವೇ ಗೊತ್ತಿಲ್ಲ, ಬ್ಯಾಂಕ್’ಗೆ ಹಣ ಡೆಪಾಸಿಟ್ ಮಾಡಲು ಬಂದಿದ್ದೆ. ಆ ಸಂದರ್ಭದಲ್ಲಿ ಹಲ್ಲೆಗೊಳಗಾದ ಯುವಕರ ತಂಡದವರು ಎದುರುಗಡೆಯಿಂದ ಬರುತ್ತಿದ್ದರು. ಈ ವೇಳೆ ಅವರಿಂದ ತಪ್ಪಿಸಿಕೊಂಡೆ. ಆದರೆ ಬಿಜೆಪಿಯವರು ನನ್ನ ಹೆಸರನ್ನು ಪೊಲೀಸರಲ್ಲಿ ಹೇಳಿದ್ದಾರೆ. ಆ ಕಾರಣಕ್ಕಾಗಿ ನನ್ನನ್ನ ಸರಕಾರಿ ಆಸ್ಪತ್ರೆಗೆ ದಾಖಲು ಆಗುವಂತೆ ಅಣ್ಣ ಹೇಳಿದರು. ಆದರೆ ಈ ಗಲಭೆಯಲ್ಲಿ ನನ್ನ ಪಾಲ್ಗೊಳ್ಳುವಿಕೆ ಇಲ್ಲ. ಹಲ್ಲೆ ಮಾಡಿದವರು ಮಾಣಿ ನಾಗು ಸಹೋದರ ರಾಕು ಮತ್ತು ತಂಡ ಎಂದು ಗೆಳಯನ ಜೊತೆ ಫೋನ್ನಲ್ಲಿ ಕಾಂಗ್ರೇಸ್ ಕಾರ್ಯಕರ್ತ ಸತ್ಯ ಒಪ್ಪಿಕೊಂಡಿರುವುದು ವಿಡಿಯೋದಲ್ಲಿ ವೈರಲ್ ಆಗಿದೆ.