ಮಂಗಳೂರು, ಮಾ 30(MSP): ನಗರದ ಬಂಟ್ಸ್ ಸರ್ಕಲ್ ನ ಸಮೀಪದಲ್ಲಿರುವ ದ.ಕ ಜಿಲ್ಲಾ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಮಾ.31ರಂದು ಸಂಜೆ 4 ಗಂಟೆಗೆ ನಾನು ಚೌಕಿದಾರ ದೇಶದ ಜನರ ಜತೆ ಪ್ರಧಾನಿ ನರೇಂದ್ರ ಮೋದಿ ಅವರ ನೇರ ಸಂವಾದ ಕಾರ್ಯಕ್ರಮವಿದೆ. ಈ ಕಾರ್ಯಕ್ರವನ್ನು ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಉದ್ಘಾಟಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಉಡುಪಿ ಅಜ್ಜರಕಾಡಿನ ಭುಜಂಗ ಪಾರ್ಕ್ ಪರಿಸರದಲ್ಲಿ ಮಾ.31 ರಂದು ಸಂಜೆ 4ಗಂಟೆಗೆ ಮೈ ಭೀ ಚೌಕೀದಾರ್ ಕಾರ್ಯಕ್ರಮ ನಡೆಯಲಿದೆ.
ಪ್ರಧಾನಿ ಮೋದಿಯವರೊಂದಿಗೆ ನೇರ ಸಂವಾದ ನಡೆಸಲು ಇಚ್ಚಿಸುವವರು ಅಂದು ಉಪಸ್ಥಿತರಿರುವಂತೆ ಜಿಲ್ಲಾ ಬಿಜೆಪಿ ಬಿಜೆಪಿ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.