ಸುಳ್ಯ, ಮಾ30(SS): ಎಸ್ಡಿಪಿಐ ಜತೆಗೆ ನಂಟು ಇಟ್ಟುಕೊಂಡಿರುವುದು ಕಾಂಗ್ರೆಸ್ ಮಾತ್ರ. ಬಿಜೆಪಿ ಪಕ್ಷಕ್ಕೆ ಎಸ್ಡಿಪಿಐ ಜತೆ ಮೈತ್ರಿ ಮಾಡಿಕೊಳ್ಳಬೇಕಾದ ದುಃಸ್ಥಿತಿ ಬಂದಿಲ್ಲ ಎಂದು ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಪತ್ರಿಕಾ ಗೋಷ್ಠಿಯಲ್ಲಿ ಟೀಕಿಸಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರು ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಎಸ್.ಡಿ.ಪಿ.ಐ ಅಭ್ಯರ್ಥಿಯ ಮನೆಗೆ ಹೋಗಿ ನಾಮಪತ್ರ ಹಿಂದಕ್ಕೆ ತೆಗೆಸಿದ್ದರು. ಈ ಬಾರಿ ಕೂಡ ಕಾಂಗ್ರೆಸ್ ನಾಮಪತ್ರ ತೆಗೆಸುವ ಕೆಲದ ಮಾಡಬಹುದು. ಹೀಗಾಗಿ ಎಸ್ಡಿಪಿಐ ಜತೆಗೆ ನಂಟು ಇಟ್ಟುಕೊಂಡಿರುವುದು ಕಾಂಗ್ರೆಸ್ ಮಾತ್ರ. ಬಿಜೆಪಿ ಅಲ್ಲ ಎಂದು ಸ್ಪಷ್ಟ ಪಡಿಸಿದರು.
ಬಳ್ಪ ಆದರ್ಶ ಗ್ರಾಮ ಪ್ರಗತಿಯಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿ ಇರುವುದನ್ನು ಸಮೀಕ್ಷೆಯೊಂದು ಬಹಿರಂಗಗೊಳಿಸಿದೆ. ಆದರ್ಶ ಗ್ರಾಮ ಶೇ. 60 ಪೂರ್ಣ ಆದರ್ಶ ಗ್ರಾಮ ಅಂದರೆ ಅಭಿವೃದ್ಧಿ ಮಾತ್ರ ಅಲ್ಲ. ಅದಕ್ಕೊಂದು ಗೈಡ್ಲೈನ್ ಇದೆ. ಆ ಆಧಾರದಲ್ಲಿ ಅಲ್ಲಿ ಕೆಲಸ ಕಾರ್ಯ ನಡೆಯಬೇಕು. ಶೇ. 60ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕಿದ ಅವರು, ಆದರ್ಶ ಗ್ರಾಮದ ಬಗ್ಗೆ ಪ್ರಶ್ನಿಸುವ ಕಾಂಗ್ರೆಸ್ ಮುಖಂಡರು, ಕಳೆದ 60 ವರ್ಷದಿಂದ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏನು ಮಾಡಿತ್ತು ಅನ್ನುವುದನ್ನು ಹೇಳಲಿ ಎಂದರು.
ವಾಣಿಜ್ಯ ಸಚಿವರು ಸುಳ್ಯದಲ್ಲಿ ಸಂವಾದ ನಡೆಸಿದ ಬಳಿಕ ದಿಲ್ಲಿಯಲ್ಲಿ ಸಭೆ ನಡೆಸಿದ್ದು, ಇಲ್ಲಿಯ ಕೃಷಿಕರ ಬೇಡಿಕೆಗೆ ಸ್ಪಂದಿಸುವ ಹಾಗೂ ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ನಿರ್ಧಾರವಾಗಿದೆ. ಬಿಎಸ್ಎನ್ಎಲ್ ಕುರಿತ ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಿದೆ. ನೀತಿ ಸಂಹಿತೆ ಇರುವುದರಿಂದ ಈ ಚುನಾವಣೆ ಮುಗಿದ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.