ಉಡುಪಿ,ಮೇ18(DaijiworldNews/KH):ಕಿನ್ನಿಮುಲ್ಕಿಯ ಕನ್ನರ್ಪಾಡಿಯಲ್ಲಿ ಗುರುವಾರ ಮಧ್ಯಾಹ್ನ ತಾಯಿ ಮತ್ತು ಮಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಬ್ರಹ್ಮಬೈದರ್ಕಳ ನಗರದ ಬಾಡಿಗೆಮನೆ ನಿವಾಸಿಯಾದ ಎಡ್ಲಿನ್ ಡೆಲಿಶಾ (83) ಹಾಗೂ ಅವರ ಮಗ ಸೆಬೆಸ್ಟಿನ್ ಅಮಿತ್ (46) ಮೃತರು.
ಈ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮನೆಯಲ್ಲಿ ಇಬ್ಬರೇ ವಾಸವಾಗಿದ್ದು, ಸೆಬೆಸ್ಟಿನ್ ಮೃತದೇಹ ಮನೆಯ ಫ್ಯಾನಿಗೆ ನೆತಾಕಿಕೊಂಡಿದ್ದು ಎಡ್ಲಿನ್ ಅವರ ಮೃತದೇಹ ಅದೇ ಕೊಠಡಿಯ ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇನ್ನು ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಐ ಮಹೇಶ್ ಪಿ.ಎಂ., ಎಎಸ್ ಐ ವಿಜಯ, ಹೆಡ್ ಕಾನ್ಸ್ ಸ್ಟೇಬಲ್ ಮರಿಗೌಡ ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹಗಳನ್ನು ಅಜ್ಜರಕಾಡು ಆಸ್ಪತ್ರೆಗೆ ಸಾಗಿಸಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821