ಬಂಟ್ವಾಳ, ಮಾ29(SS): ನಮ್ಮೆಲ್ಲರ ಚಿಂತನೆ ಒಂದೇ, ಅದು ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಲೋಕಸಭಾ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ, ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ನಡೆದ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಪೇಜ್ ಪ್ರಮುಖರ ಸಮಾವೇಶದಲ್ಲಿ ಮಾತನಾಡಿದ ಅವರು, ಮತದಾರರು ಕೊಟ್ಟ ಜವಾಬ್ದಾರಿಗೆ ಕಳಂಕ ಇಲ್ಲದೆ ಹತ್ತು ವರ್ಷಗಳ ಕಾಲ ವಿಚಾರಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ಮೂರನೇ ಬಾರಿಗೆ ಪಕ್ಷ ಅವಕಾಶ ನೀಡಿದೆ. ನಮ್ಮೆಲ್ಲರ ಚಿಂತನೆ ಒಂದೇ, ಅದು ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದು. ಈ ಚುನಾವಣೆ ರಾಷ್ಟ್ರೀಯ ವಿಚಾರಧಾರೆಗಳ ಆಧಾರದಲ್ಲಿ ನಡೆಯುವ ಚುನಾವಣೆ. ಹಾಗಾಗಿ ರಾಷ್ಟ್ರವನ್ನು ಬಲಪಡಿಸುವ ಉದ್ದೇಶದಿಂದ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಬೇಕಾಗಿದೆ ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ರಾಜ್ಯ ಸಭಾ ಸದಸ್ಯ ಆಯನೂರು ಮಂಜುನಾಥ್, ಇದು ದೇಶದ ಚುನಾವಣೆ. ಹಾಗಾಗಿ ಪ್ರತಿಯೊಬ್ಬರು ಜವಬ್ದಾರಿಯಿಂದ ಮತದಾನ ಮಾಡುವುದು ಬಹಳ ಮುಖ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಆಡಳಿತ ವ್ಯವಸ್ಥೆಯನ್ನು ಇಡೀ ಪ್ರಪಂಚ ನೋಡುವ ರೀತಿಯಲ್ಲಿ ಮಾಡಿದ್ದಾರೆ. ಸರ್ವ ದೇಶಗಳು ಮೋದಿಯವರನ್ನು ಸ್ವಾಗತಿಸುವ ರೀತಿಯಲ್ಲಿ ಭಾರತ ಮುಂದುವರಿದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಭಾರತವನ್ನು ಉನ್ನತವಾದ ಮಟ್ಟಕ್ಕೆ ತಲುಪಿಸಿದ ಪ್ರಧಾನಿಗೆ ಮತ್ತೋಮ್ಮೆ ಬಹುಮತ ನೀಡಬೇಕಾಗಿದೆ. ದೇಶ ಭಕ್ತ ಕಾರ್ಯಕರ್ತರಾದ ನಾವು ಮೋದಿಯನ್ನು ಪ್ರಧಾನಿ ಮಾಡುವ ಮೂಲಕ ದೇಶದ ರಕ್ಷಣೆಗೆ ಮುಂದಾಗೋಣ. ಮೋದಿ ಅವರು ದೇಶದ ಹೊರಗೆ ಮಾತ್ರ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಲ್ಲದೆ, ದೇಶದ ಒಳಗೂ ಸರ್ಜಿಕಲ್ ಸ್ಟ್ರೈಕ್ ಮಾಡಿ ಬಡತನ ನಿರ್ಮೂಲನೆ ಮಾಡುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಮಾತನಾಡಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ ವ್ಯವಸ್ಥೆಯನ್ನು ಎತ್ತರ ಕ್ಕೆ ಏರಿಸಿದ್ದು ಬಿಜೆಪಿ ಪ್ರಧಾನಿ ಮೋದಿ. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬೆವರನ್ನು ರಕ್ತದ ರೂಪದಲ್ಲಿ ಹರಿಸಿ ಗೆಲುವು ತಂದುಕೊಟ್ಟ ಕಾರ್ಯಕರ್ತರು ಲೋಕಸಭಾ ಸಭಾ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಮೋದಿ ಭ್ರಷ್ಟಾಚಾರ ಕಡಿಮೆ ಮಾಡಲು ಕಠಿಣ ಕ್ರಮಗಳ ಮೂಲಕ ದೇಶದ ಆರ್ಥಿಕ ವ್ಯವಸ್ಥೆಗೆ ಭದ್ರತೆ ಒದಗಿಸುವ ಕೆಲಸ ಮಾಡಿದ್ದಾರೆ. ಬಂಡವಾಳ ಶಾಹಿ ದೇಶದ್ರೋಹಿಗಳ ಮೇಲೆ ಪ್ರಭಾವ ಬೀರುವ ಮೂಲಕ ಬಡವರಿಗೆ ತಲೆ ಎತ್ತಿ ಬದುಕುವ ಅವಕಾಶ ನೀಡಿದ್ದಾರೆ ಎಂದು ತಿಳಿಸಿದರು.
ಕಡಲ ತಡಿಯ ಬಿಜೆಪಿ ಕಾರ್ಯಕರ್ತರಿಗೆ ಯಾವುದೇ ರಾಜಕೀಯ ಪಾಠದ ಅಗತ್ಯವಿಲ್ಲ, ಸಂಘಟನೆಯ ಸೂತ್ರ, ಶಾಸ್ತ್ರ ತಿಳಿದಿರುವ ಇಲ್ಲಿನ ಜನ ನಳಿನ್ ಅವರಿಗೆ ಬೆಂಬಲ ನೀಡಿ ಲೋಕಸಭೆಗೆ ಮತ್ತೊಮ್ಮೆ ಕಳುಹಿಸುವ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಹೆಚ್ಚು ಹೆಚ್ಚು ಮತಗಳನ್ನು ಕ್ರೋಢಿಕರಿಸುವ ಮೂಲಕ ದೇಶದ ಭದ್ರತೆಗಾಗಿ ಎರಡನೇ ಬಾರಿಗೆ ಮೋದಿಯವರಿಗೆ ಅವಕಾಶ ನೀಡೋಣ ಎಂದರು.