ಮಂಗಳೂರು, ಮೇ 14 (DaijiworldNews/HR): ಕರಾವಳಿ ಭಾಗದ ಕೆಲವು ಪ್ರದೇಶದಲ್ಲಿ ಶನಿವಾರ ಮಳೆಯಾದ ವರದಿಯಾಗಿದ್ದು, ಇಂದು ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಮಂಗಳೂರು ನಗರದಲ್ಲಿ ಬೆಳಗ್ಗೆ ಸುಮಾರು ಎರಡು ತಾಸುಗಳ ಕಾಲ ನಿರಂತರ ಮಳೆಯಾಗಿದ್ದು, ತಗ್ಗು ಪ್ರದೇಶಗಳಲ್ಲಿ, ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಇನ್ನು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮೇ 14ರಂದು ಕರಾವಳಿ ಭಾಗದಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮಂಗಳೂರಿನಲ್ಲಿ ಶನಿವಾರ 30.8 ಡಿ.ಸೆ. ಗರಿಷ್ಠ ಮತ್ತು 24.8 ಡಿ.ಸೆ. ಕನಿಷ್ಠ ತಾಪಾಮಾನ ದಾಖಲಾಗಿತ್ತು.