ಸುಳ್ಯ, ಮಾ 28(SM): ಮೋದಿ ನೇತೃತ್ವದ ಸರಕಾರ ಕಳೆದ ವರ್ಷ ಭ್ರಷ್ಟಚಾರ ರಹಿತ ಆಡಳಿತ ನೀಡಿದೆ ಎಂದು ಹೇಳಲು ನಮಗೆ ಹೆಮ್ಮೆಯಾಗುತ್ತದೆ. ಯಾವ ಸಂಸದನು ಕಳಂಕ್ಕೆ ಒಳಗಾಗಿಲ್ಲ ಎಂದು ಮಂಗಳೂರು ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಸುಳ್ಯದಲ್ಲಿ ಮಾತನಾಡಿದ ಅವರು ನಮ್ಮ ಕಾರ್ಯಕರ್ತರು ತಲೆ ಬಾಗುವ ಕೆಲಸವನ್ನು ನಾವು ಮಾಡಿಲ್ಲ. ಈ ಬಾರಿ ಬಿಜೆಪಿ 300ಕ್ಕೂ ಅಧಿಕ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವುದರ ಮೂಲಕ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದರು.
ಕೇಂದ್ರ ಸರಕಾರದಿಂದ ವಿವಿಧ ಯೋಜನೆಗಳನ್ನು ಜನ ಸಾಮಾನ್ಯರಿಗೆ ನೀಡಿದೆ. ದ.ಕ. ಜಿಲ್ಲೆಗೆ 16,520 ಕೋಟಿಗೂ ಅಧಿಕ ಅನುದಾನ ದೊರೆತ್ತಿದೆ. ಮಂಗಳೂರು-ಬೆಂಗಳೂರು ರಸ್ತೆಯ ಗುಂಡ್ಯದಲ್ಲಿ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಲಾಗಿದೆ. 14ನೇ ಹಣಕಾಸು ಅನುದಾನದ ಮೂಲಕ ಕೇಂದ್ರ ಸರಕಾರ ಗ್ರಾಮ ಪಂಚಾಯತ್ಗಳಿಗೆ ನೇರ ಅನುದಾನ ನೀಡುತ್ತಿದೆ ಎಂದರು.
ಬಿಜೆಪಿ ಕಾರ್ಯಕರ್ತರ ಕೊಲೆ, ಎತ್ತಿನಹೊಳೆ ವಿರೋಧಿ ಹೋರಾಟ, ಅಡಿಕೆ ಬೆಳೆಗಾರರ ಸಮಸ್ಯೆ ಹೀಗೆ ಇತರ ಸಮಸ್ಯೆಗಳ ಬಗ್ಗೆ ಪ್ರಮಾಣಿಕವಾಗಿ ಹೋರಾಟ ಮಾಡಿದ್ದೇನೆ ಎಂದು ಕಟೀಲ್ ಹೇಳಿದರು.