ಉಡುಪಿ, ಮಾ 28(SM): ಜೆಡಿಎಸ್ ಉಡುಪಿ ಚಿಕ್ಕಮಗಳೂರು ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ತಮ್ಮ ಅಧಿಕಾರ ದಾಹದಿಂದ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ನೈಜ ಕಾಂಗ್ರೆಸಿಗರಿಗೆ ಇದರಿಂದ ನೋವಾಗಿದೆ. ಪ್ರಮೋದ್ ಈ ಬಗ್ಗೆ ಅವರ ನಿಲುವನ್ನು ಸಷ್ಟ ಪಡಿಸಲಿ. ಈ ಬಾರಿ ಬಿಜೆಪಿ ಬಹುಮತಗಳ ಅಂತರದಿಂದ ಗೆಲುವು ಸಾಧಿಸುತ್ತದೆ. ಇನ್ನು ಪುನಃ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಬಂದರೆ ಜನ ಅವರನ್ನ ನಂಬುವುದಿಲ್ಲ. ಅಲ್ಲದೆ ಕೈ ಚಿಹ್ನೆಗೆ ಹೋಲುವ ಮತ್ತೊಂದು ಚಿಹ್ನೆ ಎಂದರೆ ಕಮಲವಾಗಿದೆ. ಹಾಗಾಗಿ ಕಾಂಗ್ರೆಸ್ನ ಯುವಕರು ಈ ಬಾರಿ ಬಿಜೆಪಿಗೆ ಮತ ಹಾಕುತ್ತಾರೆ ಎಂದು ರಘುಪತಿ ಭಟ್ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಮೋದ್ ಕಾಂಗ್ರೆಸ್ ಗೆ ರಾಜೀನಾಮೆ ಕೊಟ್ಟು ಜೆಡಿಎಸ್ ನ ಪ್ರಾಥಮಿಕ ಸದಸ್ಯತ್ವ ಪಡೆದಿದ್ದಾರೆ. ಆದರೆ ಎಲ್ಲಿಯೂ ಬಹಿರಂಗ ಪಡಿಸಿಲ್ಲ ಎಂದು ಹೇಳಿದ್ದಾರೆ.
ಮರಳು ಸಮಸ್ಯೆಗೆ ನೇರ ಹೊಣೆ ಪ್ರಮೋದ್ ಮಧ್ವರಾಜ್ ಹಾಗೆ ನಿಷೇಧ ತರಲು ದೊಡ್ಡ ಷಡ್ಯಂತ್ರ ರಚಿಸಿದ್ದಾರೆ. ಇದನ್ನು ನಾನು ಯಾವುದೇ ಸಾರ್ವಜನಿಕ ವೇದಿಕೆಯಲ್ಲಿ ದಾಖಲೆ ಸಮೇತ ಸಾಬೀತು ಮಾಡಲು ಸಿದ್ದ ಎಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿಧ್ದರಾಮಯ್ಯ ಅವರ ಅವಧಿಯಲ್ಲಿ ಪ್ರಮೋದ್ ಮರಳು ನಿಷೇಧ ಮಾಡವಂತೆ ಅವರ ಮೂಲಕ ಅಧಿಕಾರಿ, ಮಂತ್ರಿ ಹಾಗೂ ಜಿಲ್ಲಾಡಳಿತಕ್ಕೆ ಒತ್ತಡ ಹೇರಿದ್ದಾರೆ. ರಾಜ್ಯ ಸರಕಾರವು ನಿಷೇಧ ತೆರವಿಗೆ ಒಪ್ಪದೇ ಇದಲ್ಲಿ ಜಿಲ್ಲಾಡಳಿತ ಮಾತ್ರ ಕೈ ಕಟ್ಟಿ ಉಳಿದಿದೆ. ಮರಳಿಗಾಗಿ ಒಂದು ಸ್ಕ್ರೀನಿಂಗ್ ಕಮಿಟಿ ರಚಿಸಬೇಕು. ಈಗ ಯಾವುದೇ ಕಾನೂನಿನ ತೊಡಕಿಲ್ಲ, ಎಂದು ಹೇಳಿದ್ದಾರೆ.