ಕಾರ್ಕಳ, ಮಾ 28(MSP): ಲೋಕಸಭಾ ಚುನಾವಣೆಯನ್ನು ಎದುರಿಸಲು ಬಿಜೆಪಿ ಸರ್ವ ರೀತಿಯಲ್ಲಿ ಸಜ್ಜಾಗಿದೆ. ಎರಡು ಹಂತದ ಕಾರ್ಯಕ್ರಮಗಳನ್ನು ಮುಕ್ತಾಯಗೊಳಿಸಲಾಗಿದೆ. ಮೊದಲನೇಯದು ಆರು ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ. 33 ಗ್ರಾಮ ಪಮಚಾಯತ್ ಹಾಗೂ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಸಭೆ ಸಂಪನ್ನಗೊಂಡಿದೆ. ಆ ಮೂಲಕ ಚುನಾವಣೆ ಎದುರಿಸಬೇಕಾದ ತಂತ್ರಗಳನ್ನು ರೂಪಿಸಲಾಗಿದೆ. ಚುನಾವಣೆಗೆ ಇನ್ನಷ್ಟು ವೇಗ ನೀಡುವ ನಿಟ್ಟಿನಲ್ಲಿ ಮಾರ್ಚ್ 31 ಭಾನುವಾರದಂದು ಕಾರ್ಕಳ ಮುಂಜುನಾಥ ಪೈ ಸಭಾಂಗಣದಲ್ಲಿ ವಿಜಯ ಸಂಕಲ್ಪ ಸಮಾವೇಶ ಜರಗಲಿರುವುದು ಎಂದು ಶಾಸಕ ವಿ.ಸುನೀಲ್ಕುಮಾರ್ ಹೇಳಿದ್ದಾರೆ.
ಕಾರ್ಕಳ ವಿಕಾಸ ಕಚೇರಿಯಲ್ಲಿ ಆಯೋಜಿಸಿದ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, 220 ಬೂತ್ಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಬಿಜೆಪಿ ಅಭ್ಯರ್ಥಿ ಶೋಬಾ ಕರಂದ್ಲಾಜೆ ಹಾಗೂ ಜಿಲ್ಲಾ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ನೀಡಿದರು. ಕಾರ್ಕಳ ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ಅತೀ ಹೆಚ್ಚು ಮತಗಳ ಗೆಲುವು ಸಾಧಿಸುವ ಕುರಿತು ಸಂಕಲ್ಪ ಹೊಂದಿದೆ. ಇಡೀ ತಾಲೂಕಿನಲ್ಲಿ ಬಿಜೆಪಿ, ನರೇಂದ್ರ ಮೋದಿಯವರ ಪರ ಹಾಗೂ ಕಾಂಗ್ರೆಸ್ ವಿರುದ್ಧ ವಾತಾವರಣ ವ್ಯಕ್ತವಾಗುತ್ತಿದೆ. ಎಪ್ರಿಲ್ 2ನೇ ತಾರೀಕು ಸಂಜೆ 5 ಗಂಟಗೆ ಶಿವತಿಕೆರೆ ಸಮೀಪದ ಹಾಲ್ನಲ್ಲಿ ಪ್ರಬುದ್ಧರಗೋಷ್ಠಿಯನ್ನು ಆಯೋಜಿಸಲಾಗಿದೆ. ಶಾಸಕ ಸುರೇಶ್ಕುಮಾರ್ ಭಾಗವಹಿಸಲಿದ್ದಾರೆ.
ಸಮ್ಮಿಶ್ರ ಸರಕಾರದ 11 ತಿಂಗಳಿನ ಆಡಳಿತ ವೈಫಲ್ಯ
ಸಮ್ಮಿಶ್ರ ಸರಕಾರದ 11 ತಿಂಗಳಿನ ಆಡಳಿತ ವೈಫಲ್ಯದಿಂದ ಜನಸಾಮಾನ್ಯ ತತ್ತರಿಸಿಸುತ್ತಾರೆ. ರಾಜ್ಯದಲ್ಲಿ ಸರಕಾರ ಇದೆಯೇ ಎಂಬ ಅನುಭವವಾಗಿಲ್ಲ. ಅಭಿವೃದ್ಧಿಗೆ ಅನುದಾನದ ಕೊರತೆ ಎದುರಾಗಿದೆ. ಆಶ್ರಯ ಮನೆ ಯೋಜನೆಗೆ ಸರಕಾರದಿಂದ ಅನುದಾನವೇ ಬಿಡುಗಡೆಯಾಗಿಲ್ಲ. ಪರಿಣಾಮವಾಗಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ. ಈ ಕಾರಣಗಳಿಂದಾಗಿ ಸಮ್ಮಿಶ್ರ ಪಕ್ಷದ ಅಭ್ಯರ್ಥಿಯನ್ನು ತಿರಸ್ಕರಿಸುವುದಕ್ಕೆ ಮತದಾರರು ಮುಂದಾಗಿದ್ದಾರೆ ಎಂದರು.
ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರಿಂದ ಸಣ್ಣಪುಟ್ಟ ವ್ಯತ್ಯಾಸಗಳು ಆಗಿದಲ್ಲಿ ಅದು ಪಕ್ಷದೊಳಗೆ ಸರಿಮಾಡಿಕೊಳ್ಳುತ್ತೇವೆ. ಕಾಂಗ್ರೆಸ್ನವರು ಆರೋಪಿಸುವಂತೆ ಅಂತಹ ಘಟನೆಗಳು ನಡೆದೇ ಇಲ್ಲ. ವೀರಪ್ಪ ಮೊಯಿಲಿಯವರನ್ನು ವರ್ಷದ ಕಲಾತಿಥಿ ಎನ್ನಬೇಕೆ ಎಂದು ಪ್ರಶ್ನಿಸಿದ ಶಾಸಕ ಸುನೀಲ್ಕುಮಾರ್ ಮಾತು ಮುಂದುವರಿಸಿ ಅಂತಹ ವೀರಪ್ಪ ಮೊಯಿಲಿ ಅವರನ್ನು ಕ್ಷೇತ್ರದ ಮತರಾದರು ಐದು ಬಾರಿ ಗೆಲ್ಲಿಸಿದ್ದಾರೆ. ರಾಜ್ಯದ ಜವಾಬ್ದಾರಿ ಹಾಗೂ ಬೇರೆ ಬೇರೆ ಕಾರಣಗಳಿಂದಾಗಿ ಅವರ ಕ್ಷೇತ್ರಕ್ಕೆ ನೀಡಿದ ಭೇಟಿ ಕಾರ್ಯಕ್ರಮಗಳು ಕಡಿಮೆಯಾಗಿರಬಹುದು. ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆಯವರ ಬಗ್ಗೆ ಆರೋಪಿಸುವ ಕಾಂಗ್ರೆಸ್ಗಳು ಆತ್ಮವಿಮರ್ಶೆ ಮಾಡಬೇಕಾದ ಕಾಲ ಕೂಡಿಬಂದಿದೆ. 11 ಅವರ ಪಾತ್ರವೇನು? ಕಳೆದ ಬಾರಿ ಮುಖ್ಯಮಂತ್ರಿಯಾಗಿದವರು ಉಡುಪಿ ಜಿಲ್ಲೆಗೆ ಒಂದೇ ಒಂದು ಬಾರಿ ಭೇಟಿ ನೀಡಿಲ್ಲ ಎಂದು ಲೇವಡಿ ಮಾಡಿದರು.