ಮಂಗಳೂರು, ನ 6: ಡಾನ್ ಬಾಸ್ಕೊ ಹಾಲ್ನಲ್ಲಿ ದೇಹ ಧಾರ್ಢ್ಯ ಸ್ಪರ್ಧೆ ನಡೆಯುತ್ತಿರುವ ವೇಳೆಯೇ ಕುಸಿದು ಬಿದ್ದು ಯುವಕರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ಬಂಟ್ವಾಳ ತಾಲೂಕಿನ ಫರಂಗಿಪೇಟೆ ನಿವಾಸಿ ವಿನಯರಾಜ್ (34) ಎಂದು ಗುರುತಿಸಲಾಗಿದೆ.
ವೃತ್ತಿಯಲ್ಲಿ ಎಲೆಕ್ಟ್ರಿಶಿಯನ್ ಆಗಿದ್ದ ವಿನಯ್ ರಾಜ್ ಮೊದಲ ಸುತ್ತಿನ ಪ್ರದರ್ಶನ ಮಾಡಿ ಎರಡನೇ ಸುತ್ತಿನ ಸ್ಪರ್ಧೆಗೆ ತಯಾರಾಗಿದ್ದರು. ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.