ಮಂಗಳೂರು,ಮಾ27(AZM): ವಯೋವೃದ್ಧ ಕಾಯಿಲೆಯಿಂದ ಬಳಲುತ್ತಿದ್ದ ಮಂಗಳೂರಿನ ಖ್ಯಾತ ಗುತ್ತಿಗೆದಾರ ಬಿ.ದೇವದಾಸ್(86) ಅವರು ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಿಧನರಾಗಿದ್ದಾರೆ.
ಇವರು ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯರ ಕಾಲದಲ್ಲಿ ವಿಧಾನಸೌಧದ ಒಂದು ಪಾರ್ಶ್ವದ ಕಟ್ಟಡ ಕಾಮಗಾರಿಯ ಮೇಲ್ವಿಚಾರಕರಾಗಿ ದುಡಿದಿದ್ದರು. ಅಲ್ಲದೆ ಇವರು ಮಂಗಳೂರು ನಗರದಲ್ಲಿ ಅತ್ಯಂತ ಅನುಭವಿ ಕಟ್ಟಡ ನಿರ್ಮಾಣಗಾರರಾಗಿದ್ದಾರೆ. ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದ ನವೀಕರಣದ ಗುತ್ತಿಗರ ಕಾಮಗಾರಿಯನ್ನು ವಹಿಸಿದ್ದರು. ಅಲ್ಲದೆ ರಾಜ್ಯದ ನಾನಾ ಕಡೆಗಳಲ್ಲಿ ಸುಪ್ರಸಿದ್ಧ ಕಟ್ಟಡಗಳು, ಆಸ್ಪತ್ರೆಗಳು, ದೇವಾಲಯಗಳು, ಚರ್ಚ್ ಗಳು, ಮಸೀದಿಗಳ ಕಾಮಗಾರಿಗಳ ಮೇಲ್ವಿಚಾರಕರಾಗಿ ದುಡಿದಿದ್ದ ದೇವದಾಸ್ ಅವರು. ಸಮಾಜ ಸೇವಕರಾಗಿಯೂ ಕೆಲಸ ಮಾಡುತ್ತಿದ್ದರು.
ಇವರಿಗೆ ರಾಷ್ಟ್ರೀಯ ರತ್ನ ಪ್ರಶಸ್ತಿ, ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ, ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ, ರಾಷ್ಟ್ರೀಯ ರಾಜೀವ ಗಾಂಧಿ ಸದ್ಭಾವನಾ ಪ್ರಶಸ್ತಿ, ಅಲ್ಟ್ರಾಟೆಕ್ ಪ್ರಶಸ್ತಿ, ಬಸವಜ್ಯೋತಿ ಪ್ರಶಸ್ತಿ ಇವರ ಸೇವೆಯನ್ನು ಪರಿಗಣಿಸಿ ಅರಸಿ ಬಂದಿರುವ ಪ್ರಶಸ್ತಿಗಳು ಲಭಿಸಿವೆ.