ಮಂಗಳೂರು,ಮಾ 27(MSP): ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಒಟ್ಟು 15 ಮಂದಿ ಕಣದಲ್ಲಿದ್ದು, ಮಾ.27ರ ಬುಧವಾರವಾದ ಇಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಮಂಗಳವಾರ ಒಂದೇ ದಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ನಾಮಪತ್ರಗಳು ಸಲ್ಲಿಕೆಯಾಗಿದ್ದು ಒಟ್ಟಾರೆಯಾಗಿ 24 ನಾಮಪತ್ರಗಳು ಸಲ್ಲಿಕೆಯಾಗಿವೆ.
ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿಯಿಂದ ನಳಿನ್ ಕುಮಾರ್ ಕಟೀಲ್, ಬಿಜೆಪಿಯಿಂದ ಸುದರ್ಶನ, ಕಾಂಗ್ರೆಸ್ ನಿಂದ ಮಿಥುನ್ ರೈ, ಸೋಶಿಯಲ್ ಡೆಮಾಕ್ರಟಿಕ್ ಪಕ್ಷದಿಂದ ಮಹಮ್ಮದ್ ಇಲಿಯಾಸ್, ಇಸ್ಮಾಯಿಲ್ ಶಾಫಿ ಕೆ, ಬಿಎಸ್ಪಿಯಿಂದ ಸತೀಶ್ ಸಾಲ್ಯಾನ್ , ಲೋಕ ತಾಂತ್ರಿಕ ಜನತಾದಳ -ಹಿಂದುಸ್ಥಾನ ಜನತಾ ಪಾರ್ಟಿಯಿಂದ ಸುಪ್ರೀತ್ ಕುಮಾರ್ ಪೂಜಾರಿ, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ವಿಜಯ ಶ್ರೀನಿವಾಸ ಸಿ, ಪಕ್ಷೇತರರಾಗಿ ಡೊಮಿನಿಕ್ ಅಲೆಗ್ಸಾಂಡರ್ ಡಿಸೋಜಾ, ಮಹಮ್ಮದ್ ಖಾಲಿದ್, ವೆಂಕಟೇಶ್ ಬೆಂಡೆ, ಅಬ್ದುಲ್ ಹಮೀದ್, ಸುರೇಶ್ ಪೂಜಾರಿ ಎಚ್,ಡಾ. ದೀಪಕ್ ರಾಜೇಶ್ ಕುವೆಲ್ಲೊ, ಮ್ಯಾಕ್ಸಿಂ ಪಿಂಟೋ ಅಖಾಡಕ್ಕೆ ಇಳಿದಿದ್ದಾರೆ.
ನಾಮಪತ್ರ ವಾಪಸ್ ಪಡೆಯಲು 29 ಕೊನೆಯ ದಿನವಾಗಿದೆ.