ಮಂಗಳೂರು, ಮೇ 13(DaijiworldNews/MS): ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮತ ಎಣಿಕೆ ಕಾರ್ಯವು ಕೊಂಚ ವಿಳಂಬವಾಗಿ ಪ್ರಾರಂಭಗೊಂಡಿದೆ. ಅದಕ್ಕೆ ಕಾರಣವೆಂದರೆ, ಸ್ಟ್ರಾಂಗ್ ರೂಮ್ನ ಕೀ ಕಾಣೆಯಾಗಿದ್ದು, ಸಾಕಷ್ಟು ಆತಂಕಕ್ಕೂ ಕಾರಣವಾಗಿತ್ತು.
ಮಂಗಳೂರು ಉತ್ತರದ ಕ್ಶೇತ್ರದ ಮತಯಂತ್ರಗಳಿದ್ದ ಸ್ಟ್ರಾಂಗ್ ರೂಮ್ನ ಕೀ ಕಾಣಿಸದಾದಗ ಬಳಿಕ ಕಾರ್ಪೆಂಟರ್ ಅನ್ನು ತುರ್ತಾಗಿ ಸ್ಥಳಕ್ಕೆ ಕರೆಸಿಕೊಂಡು ಸ್ಟ್ರಾಂಗ್ ರೂಮ್ನ ಬಾಗಿಲನ್ನು ಒಡೆದು ತೆಗೆಯಲಾಗಿದೆ. ಬಳಿಕ ಸ್ಟ್ರಾಂಗ್ ರೂಮ್ಗೆ ಮತ ಎಣಿಕೆ ಸಿಬ್ಬಂದಿ ಪ್ರವೇಶಿಸಿದ್ದಾರೆ. ಚುನಾವಣಾ ಅಧಿಕಾರಿಗಳ ಬೇಜವಾಬ್ದಾರಿಗೆ ಆಕ್ರೋಶ ಕೂಡ ವ್ಯಕ್ತವಾಗಿದೆ.