ಮಂಗಳೂರು, ಮೇ 13(DaijiworldNews/MS):ಇಂದಿನ ಚುನಾವಣಾ ಫಲಿತಾಂಶದಲ್ಲಿ ಕರಾವಳಿ ಭಾಗದಲ್ಲಿ ಗಮನಸೆಳೆದಿರುವ ಎರಡು ಪ್ರಮುಖ ಕ್ಷೇತ್ರಗಳೆಂದರೆ ಅದು ಪುತ್ತೂರು ಮತ್ತು ಕಾರ್ಕಳ.
ಈ ಎರಡು ಕ್ಷೇತ್ರವು ಪ್ರಸ್ತುತ ಬಿಜೆಪಿ ಕೈಯಲ್ಲಿದ್ದು, ಅಲ್ಲಿ ಪಕ್ಷೇತರು ಪ್ರಮುಖ ಪ್ರತಿಸ್ಪರ್ಧಿಯಾಗಿರುವ ಕಾರಣ ಫಲಿತಾಂಶದ ಮೇಲೆ ಎತ್ತರ ಚಿತ್ತ ಹರಿದಿದೆ.
ಪುತ್ತೂರಿನಲ್ಲಿ ಬಿಜೆಪಿಯಲ್ಲಿ ಟಿಕೆಟ್ ಸಿಗದ ಹಿನ್ನೆಲೆ ಅರುಣ್ ಪುತ್ತಿಲ ಬಿಜೆಪಿಯ ಆಶಾ ತಿಮ್ಮಪ್ಪ ಗೌಡ ವಿರುದ್ಧ ಕಣಕ್ಕಿಳಿದಿದ್ದಾರೆ. ಅವರು ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಹವಾ ಸೃಷ್ಟಿಸಿದ್ದಾರೆ. ಅದೇ ರೀತಿ ಕಾರ್ಕಳದಲ್ಲಿಯೂ ಸಚಿವ ಸುನಿಲ್ ಕುಮಾರ್ ವಿರುದ್ಧ ಪ್ರಮೋದ್ ಮುತಾಲಿಕ್ ಕಣಕ್ಕಿಳಿದ್ದು, ಇಲ್ಲಿ ಮತ ವಿಭಜನೆಯಾದರೆ ಮೂರನೇ ಅಭ್ಯರ್ಥಿಗೆ ಲಾಭವಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.