ಉಡುಪಿ, ಮೇ 13 (DaijiworldNews/MS): ಉಡುಪಿಯ ಸೈಂಟ್ ಸಿಸಿಲಿ ಕಾನ್ವೆಂಟ್ ನಲ್ಲಿ ನಡೆಯಲಿರುವ ಮತ ಎಣಿಕೆ ನಡೆಯಲಿದ್ದು , ಮತ ಎಣಿಕೆ ಕೇಂದ್ರದಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಇದ್ದು ಎಣಿಕಾ ಕೇಂದ್ರಕ್ಕೆ ಬರುವವರಿಗೆ ಮೊಬೈಲ್, ಬೆಂಕಿಪೆಟ್ಟಿಗೆ, ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಒಳಗಡೆ ತರದಂತೆ ನಿಷೇಧಿಸಲಾಗಿದೆ.
ಆದರೆ ಕಾಲಿಗೆ ಮೊಬೈಲ್ ಕಟ್ಟಿಕೊಂಡು ಮತದಾನ ಕೇಂದ್ರಕ್ಕೆ ಆಗಮಿಸಿದ ಬೈಂದೂರು ವಿಧಾನಸಭಾ ಕ್ಷೇತ್ರದ ಕೇಸರಿ ಶಾಲು ಧರಿಸಿದ್ದ ಏಜಂಟ್ ನನ್ನು ದ್ವಾರದಲ್ಲೇ ತಡೆದು ಪೊಲೀಸರು ವಾಪಾಸು ಕಳುಹಿಸಿದ್ದಾರೆ.
ಕಾಲಿಗೆ ಮೊಬೈಲ್ ಕಟ್ಟಿಕೊಂಡು ಕೌಂಟಿಂಗ್ ಸೆಂಟರ್ ಒಳನುಗ್ಗಲು ಯತ್ನಿಸಿದ ಬೈಂದೂರು ಬಿಜೆಪಿ ಏಜೆಂಟ್ ಸದಾಶಿವ ಕಂಚುಗೋಡನನ್ನು ಪೊಲೀಸರು ದ್ವಾರದಲ್ಲೇ ತಡೆಹಿಡಿದು ವಾಪಾಸ್ ಕಳುಹಿಸಿದ್ದಾರೆ.
ಇನ್ನು ಬೆಳಗ್ಗೆ 7.30ಕ್ಕೆ ಸ್ಟ್ರಾಂಗ್ ರೂಂ ಓಪನ್ ಆಗಿದ್ದು ಬೆಳಗ್ಗೆ 8 ಗಂಟೆಗೆ ಅಂಚೆ ಮತದಾನ ಎಣಿಕೆ ಆರಂಭವಾಗಲಿದೆ. ಮುನ್ನೆಚ್ಚರಿಕೆ ಕ್ರಮದ ದೃಷ್ಟಿಯಿಂದ ಪ್ರತಿ ಟೇಬಲ್ಗೆ ಸಿಸಿ ಟಿವಿ ಅಳವಡಿಕೆ ಹಾಗೂ ಮತ ಏಣಿಕೆ ಕೇಂದ್ರದ ಬಳಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.