ಮಂಗಳೂರು, ಮೇ 12 (DaijiworldNews/MS): ಬಿಜೆಪಿ ಭದ್ರಕೋಟೆ ದಕ್ಷಿಣ ಕನ್ನಡಲ್ಲಿ ಈ ಬಾರಿ ಅಚ್ಚರಿಯ ಫಲಿತಾಂಶ ಹೊರಬಿದ್ದರು ಆಶ್ಚರ್ಯವಿಲ್ಲ. 2013ರ ಫಲಿತಾಂಶ ಮರುಕಳಿಸಬಹುದೇ ಎಂದು ಕಾಂಗ್ರೆಸ್ ಎದುರುನೋಡುತ್ತಿದೆ. ಆದರೆ 8 ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಗೆ ಹೋಗುವ ಸಾಧ್ಯತೆ ಕಡಿಮೆ. ಕೋಮುದ್ವೇಷ ಪ್ರಕರಣ, ಹಿಜಾಬ್ , ಧರ್ಮದಂಗಲ್ ವಿಚಾರಗಳು ಈ ಬಾರಿ ಫಲಿತಾಂಶವನ್ನು ನಿರ್ಣಯಿಸುವ ಸಾಧ್ಯತೆ ಇದೆ. ಇನ್ನೊಂದೆಡೆ ಬಜರಂಗದಳ ನಿಷೇಧವೂ ಸಂಘ ಪರಿವಾರದ ಕಾರ್ಯಕರ್ತರಿಗೆ ಸಿಡಿಮಿಡಿ ಉಂಟುಮಾಡಿದೆ.
ಒಟ್ಟು 8 ಕ್ಷೇತ್ರಗಳ ಪೈಕಿ 6 ಕಡೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಇದ್ದು ಗೆಲುವಿನ ಬಗ್ಗೆ ಊಹಿಸುವುದು ಕಷ್ಟವಾಗಿದೆ.
ಪ್ರಸ್ತುತ 8 ಕ್ಷೇತ್ರಗಳ ಪೈಕಿ 7 ಕಡೆ ಬಿಜೆಪಿ ಶಾಸಕರಿದ್ದು, ಮಂಗಳೂರು ಉಳ್ಳಾಲ ಮಾತ್ರ ಕಾಂಗ್ರೆಸ್ ತೆಕ್ಕೆಯಲ್ಲಿದೆ.
ಪುತ್ತೂರಿನಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಕಣದಲ್ಲಿ ಇರುವ ಕಾರಣ ಮತ್ತು ಮಂಗಳೂರು ಉಳ್ಳಾಲದಲ್ಲಿ ಎಸ್ ಡಿಪಿಐ ಪ್ರಬಲ ಸ್ಪರ್ಧೆ ಇರುವ ಕಾರಣ ಎರಡು ಕಡೆ ತ್ರಿಕೋಣ ಸ್ಪರ್ಧೆ ಇದೆ.