ಉಡುಪಿ,ಮೇ11(Daijiworld News/KH):ಜಿಲ್ಲೆಗಳಲ್ಲಿ ಸಂಪೂರ್ಣವಾಗಿ ಮತದಾನ ಪ್ರಕ್ರಿಯೆ ಮುಕ್ತಯಗೊಂಡಿದ್ದು , ಮುನ್ನೆಚ್ಚರಿಕೆ ಕ್ರಮದಿಂದ ನಿರ್ಮಿಸಿದ್ದ ಚೆಕ್ಪೋಸ್ಟ್ಗಳನ್ನು ತೆರವುಗೊಳಿಸಲಾಗಿದೆ.
ಚುನಾವಣೆ ಜಾರಿಯಾದ ಬಳಿಕ ಈ ಜಿಲ್ಲೆಯ ಭಾಗದಲ್ಲಿರುವ ಬೈಂದೂರು ವಿಧಾನಸಭಾ ಕ್ಷೇತ್ರದ ಶಿರೂರು, ಕೊಲ್ಲೂರು, ಹೊಸಂಗಡಿ, ಕುಂದಾಪುರದ ಹಾಲಾಡಿ, ಕಂಡ್ಲೂರು, ತೆಕ್ಕಟ್ಟೆ, ಉಡುಪಿಯ ನೇಜಾರು, ಬಲಾೖಪಾದೆ ಉದ್ಯಾವರ, ಅಲೆವೂರು, ಕಾಪುವಿನ ಕಟಪಾಡಿ, ಹೆಜಮಾಡಿ, ಮೂಡುಬೆಳ್ಳೆ, ಅಂಜಾರು, ಕಾರ್ಕಳದ ನಾಡಾಲು, ಸೋಮೇಶ್ವರ, ಸಾಣೂರು, ಮುದರಂಗಡಿ, ಈದು, ಹೊಸ್ಮಾರು, ಬೆಳ್ಮಣ್, ಚೆಕ್ಪೋಸ್ಟ್ ಗಳನ್ನು ತೆರವುಗೊಳಿಸಲಾಯಿತು.
ಅರೆಸೇನಾಪಡೆಯ ಸುಮಾರು 19 ತಂಡಗಳು ಆಗಮಿಸಿದ್ದು, ಸುಮಾರು 2 ಸಾವಿರ ಸಿಬ್ಬಂದಿ ಜಿಲ್ಲೆಯಲ್ಲಿ ಕರ್ತವ್ಯದಲ್ಲಿದ್ದು, ಇದಲ್ಲದೇ ಮಹಾರಾಷ್ಟ್ರ ಹಾಗೂ ತಮಿಳುನಾಡು ಪೊಲೀಸರೂ ಆಗಮಿಸಿದ್ದರು.