ಕಾಸರಗೋಡು, ಮೇ 10 (DaijiworldNews/HR): ಚಿಟ್ಟಾರಿಕ್ಕಲ್ನಲ್ಲಿ ಉಯ್ಯಾಲೆ ಕುತ್ತಿಗೆಗೆ ಬಿಗಿದು ಬಾಲಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಚಿಟ್ಟಾರಿಕ್ಕಲ್ ಕಂಬಲ್ಲೂರು ತಾಮರಸ್ಶೆರಿಯ ಸುಧೀಶ್ ಅವರ ಪುತ್ರ ಸೌರಂಗ್ (9) ಮೃತಪಟ್ಟ ಬಾಲಕ.
ಮನೆಯ ಸಮೀಪದ ರಬ್ಬರ್ ತೋಟದಲ್ಲಿ ಸೀರೆ ಬಳಸಿ ಉಯ್ಯಾಲೆ ಕಟ್ಟಲಾಗಿದ್ದು, ಉಯ್ನಾಲೆಯಲ್ಲಿ ಆಟ ಆಡುತ್ತಿದ್ದಾಗ ಕುತ್ತಿಗೆಗೆ ಬಿಗಿದು ಗಂಭೀರ ಸ್ಥಿತಿಗೆ ತಲುಪಿದ ಸೌರಂಗ್ನನ್ನು ಸ್ಥಳೀಯರು ಆಸ್ಪತ್ರೆಗೆ ಕೊಂಡೊಯ್ದರೂ ರಕ್ಷಿಸಲು ಸಾಧ್ಯವಾಗಲಿಲ್ಲ.
ಚಿಟ್ಟಾರಿಕ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು ಮೃತ ದೇಹವನ್ನು ಶವ ಮಹಜರಿಗಾಗಿ ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.