ಮಂಗಳೂರು, ಮೇ 09 (DaijiworldNews/SM): ಕರ್ನಾಟಕ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ನಾಳೆ ರಾಜ್ಯಾದ್ಯಂತ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಜಿಲ್ಲೆಯಲ್ಲಿ 100% ಚುನಾವಣೆ ಆಗುವಂತೆ ಜನ್ರು ಮಾಡಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಎಂಟು ವಿಧಾನ ಸಭಾ ಕ್ಷೇತ್ರದ 1869 ಮತಗಟ್ಟೆಗಳಿವೆ. ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಮಾಸ್ಟರಿಂಗ್ ಕೇಂದ್ರದಿಂದ ತೆರಳಿದ್ದಾರೆ. ಈ ಪ್ರದೇಶದಲ್ಲಿ ಇವಿಎಂ ಭದ್ರತೆಗಾಗಿ ಪೊಲೀಸ್, ಸಿಎಸ್ಎಫ್, ನೇಮಕ ಮಾಡಲಾಗಿದೆ. ಬೆಳಗ್ಗೆ 5.30ಕ್ಕೆ ಮಾಕ್ ಪೋಲ್ ಪ್ರಾರಂಭವಾಗಿದೆ. ಮಾಕ್ ಪೋಲ್ ಬಳಿಕ 7 ಗಂಟೆಗೆ ಮತದಾನ ಆರಂಭವಾಗಲಿದೆ. ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೬ ಗಂಟೆ ವರೆಗೆತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. 6 ಗಂಟೆಗಳ ಬಳಿಕ ಮತ ಕೇಂದ್ರದಲ್ಲಿ ಮತದಾರರು ಸಾಲಿನಲ್ಲಿ ಇದ್ದರೆ ಮತದಾನ ಮುಗಿಯುವವೆರೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಇವಿಎಂ ಮತದಾನದ ಬಳಿಕ ಡಿಮಾಸ್ಟರಿಂಗ್ ಸೆಂಟರ್ ಗೆ ತರಲಾಗುತ್ತದೆ. ಬಳಿಕ ಅಲ್ಲಿಂದ ಮತ ಎಣಿಕಾ ಕೇಂದ್ರ ಎನ್ಐಟಿಕೆಯ ಸ್ಟ್ರಾಂಗ್ ರೂಂ ನಲ್ಲಿಡಲಾಗುತ್ತದೆ. ಮತದಾನ ಕೇಂದ್ರದಲ್ಲಿ ಕಾರ್ಯನಿರ್ವಾಹಿಸುವ ಅಧಿಕಾರಿ, ಸಿಬ್ಬಂದಿಗೆ ಯಾರು ಆಹಾರ ಪದಾರ್ಥಗಳನ್ನು ನೀಡುವಂತಿಲ್ಲ ಎನ್ನುವ ವಿಚಾರವನ್ನು ಕೂಡ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.