ಉಡುಪಿ,ಮಾ26(AZM): ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನಾಂಕವಾಗಿದ್ದು, 14 ಅಭ್ಯರ್ಥಿಗಳಿಂದ ಒಟ್ಟು 26 ನಾಮಪತ್ರಗಳನ್ನು ಸಲ್ಲಿಸಲಾಗಿದೆ.
ಸಲ್ಲಿಸಲಾಗಿರುವ ಎಲ್ಲಾ ನಾಮಪತ್ರಗಳ ಪರಿಶೀಲನೆಗಳನ್ನು ಮಾ.27ರಂದು 11 ಗಂಟೆಗೆ ಕಛೇರಿಯ ಸಭಾಂಗಣದಲ್ಲಿ ಉಮೇದುದಾರರ ಸಮಕ್ಷದಲ್ಲಿ ನಡೆಸಲಾಗುತ್ತದೆ. ಸಿಂಧುವಾದ ನಾಮಪತ್ರಗಳ ಪಟ್ಟಿಯನ್ನು ಅಪರಾಹ್ನ ಪ್ರಕಟಿಸಲಾಗುತ್ತದೆ. ನಾಮಪತ್ರಗಳನ್ನು ವಾಪಾಸು ಪಡೆಯುವ ಕೊನೆಯ ದಿನಾಂಕ ಮಾ.29 ಅಪರಾಹ್ನ 3 ಗಂಟೆಯಾಗಿದೆ. ಅದೇ ದಿನ ಚಿಹ್ನೆಗಳನ್ನು ವಿತರಿಸಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ನಾಮಪತ್ರಗಳನ್ನು ಸಲ್ಲಿಸಿರುವ 14 ಉಮೇದುದಾರರ ವಿವರಗಳು
ಪ್ರಮೋದ್ ಮಧ್ವರಾಜ್: ಜನತಾದಳ
ಶೋಭಾ ಕರಂದ್ಲಾಜೆ: ಭಾರತೀಯ ಜನತಾ ಪಾರ್ಟಿ
ಎಂ.ಕೆ. ಗಣೇಶ್: ಪಕ್ಷೇತರ
ಎಂಕೆ ದಯಾನಂದ : ಪ್ರೌಟಿಸ್ಟ್ ಸರ್ವ ಸಮಾಜ
ಸುರೇಶ್ ಕುಂದರ್: ಉತ್ತಮ ಪ್ರಜಾಕೀಯ ಪಾರ್ಟಿ
ಗಣಪತಿ ಶೆಟ್ಟಿಗಾರ: ಪಕ್ಷೇತರ
ಪಿ.ಗೌತಮ್ ಪ್ರಭು ಶಿವಸೇನಾ
ವಿಜಯ್ ಕುಮಾರ್: ಸಿಪಿಐ
ಶೇಖರ್ ಪಾವಂಜೆ: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ
ಸುಧೀರ್ ಕಾಂಚನ್: ಪಕ್ಷೇತರ
ಪಿ.ಪರಮೇಶ್ವರ: ಬಹುಜನ ಸಮಾಜ ಪಾರ್ಟಿ
ಕೆ.ಸಿ. ಪ್ರಕಾಶ : ಪಕ್ಷೇತರ
ಅಮೃತ ಶೆಣೈ ಪಿ: ಪಕ್ಷೇತರ
ಅಬ್ದುಲ್ ರೆಹಮಾನ್ : ಪಕ್ಷೇತರ
ಒಟ್ಟಾರೆ ಉಡುಪಿ ಜಿಲ್ಲೆಯಲ್ಲಿ 14 ಜನ ಅಭ್ಯರ್ಥಿಗಳು ಕಣಕಿಳಿದಿದ್ದು, ಇವರಲ್ಲಿ ಶೋಭಾ ಕರಂದ್ಲಾಜೆ ಹಾಗೂ ಪ್ರಮೋದ್ ಮಧ್ವರಾಜ್ ಇವರಿಬ್ಬರು ಘಟಾನುಘಟಿಗಳ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ.