ಕಾಪು, ಮೇ 08 (DaijiworldNews/HR): ಅಧಿಕಾರ ದರ್ಪವಿಲ್ಲದ ಅಪರೂಪದ ರಾಜಕಾರಣಿ ವಿನಯ ಕುಮಾರ್ ಸೊರಕೆ. ಕಾರ್ಯಕರ್ತರಿಗೆ ಅತ್ಯಂತ ಗೌರವ ಕೊಡುವ ಬಡವರ ಪರ ಕಾಳಜಿ ಇರೋ ರಾಜಕಾರಣಿ ಕಾಪು ಕ್ಷೇತ್ರಕ್ಕೆ ಸಿಕ್ಕಿದ್ದಾರೆ ಅದು ನಿಮ್ಮೆಲ್ಲರ ಭಾಗ್ಯ ಎಂದು ಕಾಂಗ್ರೆಸ್ ವಕ್ತಾರ ನಿಖಿತ್ ರಾಜ್ ಮೌರ್ಯ ಹೇಳಿದ್ದಾರೆ.
ಮುದರಂಗಡಿ ಪೇಟೆಯಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಭಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದೇ ಬರುತ್ತೆ ಅಂತಾ ಎಲ್ಲಾ ಸಮೀಕ್ಷೆಯಲ್ಲಿ ನಿಜವಾಗಿದೆ. ಕಾಪುವಿನಲ್ಲಿ ವಿನಯಣ್ಣ ಶಾಸಕರಾದರೆ ಮಂತ್ರಿ ಅಗೇ ಆಗ್ತಾರೆ. ಕಾಪು ಇನ್ನೆಂದು ಕಾಣದ ಭಾರೀ ಅಭಿವೃದ್ಧಿ ಯಾಗುತ್ತೆ ಅಂತಾ ನಿಖತ್ ರಾಜ್ ಮೌರ್ಯ ಹೇಳಿದ್ದಾರೆ.
ಬಿಜೆಪಿ ಭಾರೀ ಸೋಲಿನ ಹತಾಶೆಯಲ್ಲಿದೆ. ಸೋಲಿನ ಭಯದಲ್ಲಿ ಪ್ರಧಾನಿಯವರನ್ನು ದಾಖಲೆ ಸಂಖ್ಯೆಯಲ್ಲಿ ರಾಜ್ಯಕ್ಕೆ ಕರೆಯಿಸಿ ಪ್ರಚಾರ ಮಾಡಿದ ಕೀರ್ತಿ ಕರ್ನಾಟಕ ಬಿಜೆಪಿಗೆ ಇದೆ ಅಂತಾ ಮೌರ್ಯ ಲೇವಡಿ ಮಾಡಿದರು. ವಿನಯಣ್ಣ ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಇರೋ ರಾಜಕಾರಣಿ ಯಾವುದೇ ಭ್ರಷ್ಟಚಾರ, ದುರಾಡಳಿತ ಆರೋಪ ವಿನಯಣ್ಣನ ಮೇಲೆ ಇಲ್ಲ. ವಿನಯಣ್ಣನ ಕೈ ಹಿಡಿದು ಈ ಬಾರಿ ಗೆಲ್ಲಿಸುವ ಕರ್ತವ್ಯವನ್ನು ಮತದಾರರು ಮಾಡಬೇಕಿದೆ ಅಂತಾ ನಿಖಿತ್ ರಾಜ್ ಮೌರ್ಯ ಹೇಳಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಲಂಚ ಭ್ರಷ್ಟಾಚಾರದಿಂದಾಗಿ 5000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚಿ ಬಡ ಜನರನ್ನು ಶಿಕ್ಷಣ ವಂಚಿತರನ್ನಾಗಿಸುತ್ತಿದ್ದಾರೆ ಅಂತಾ ಮೌರ್ಯ ವಿಷಾದ ವ್ಯಕ್ತಪಡಿಸಿದರು.
ಹಿರಿಯಡ್ಕ ಪೇಟೆಯಲ್ಲಿ ನಡೆದ ಸಬೇಯಲ್ಲಿ ಮಾತನಾಡಿದ ವಿನಯ ಕುಮಾರ್ ಸೊರಕೆ, ದೇವರು ಧರ್ಮ ಅಂತಾ ಮಾತಾಡೋ ಬಿಜೆಪಿ ನಾಯಕರು ಇಂದು ದೇವಸ್ಥಾನದ ವಿಷಯದಲ್ಲಿ ಹೀನಾಯ ರಾಜಕೀಯ ಮಾಡೋಕೆ ಶುರು ಮಾಡಿದ್ದಾರೆ. ದೇವಸ್ಥಾನ ಧರ್ಮ ಅಂತಾ ಯುವಜನತೆಗೆ ಪಾಠ ಹೇಳುವ ಬಿಜೆಪಿ ರಾಜಕೀಯ ನಾಯಕರು ಹಿರಿಯಡ್ಕ ವೀರಭದ್ರ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ವಿಚಾರದಲ್ಲಿ ಮತ್ತು ಪೆರ್ಡೂರು ಅನಂತ ಪದ್ಮನಾಭ ದೇವಸ್ಥಾನದ ರಸ್ತೆ ಅಗಲೀಕರಣ ವಿಷಯದಲ್ಲಿ ರಾಜಕೀಯ ಮಾಡಿ ದೇವಸ್ಥಾನದ ವಾಸ್ತುವಿಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ. ನನ್ನ ಶಾಸಕತ್ವದ ಅವಧಿಯಲ್ಲಿ ಹಿರಿಯಡ್ಕ ವ್ಯಾಪ್ತಿಯಲ್ಲಿ 800 ಅಕ್ರಮ ಸಕ್ರಮದ ಮನೆ ನಿವೇಶನ ಶಿಫಾರಸು ಅರ್ಜಿಯನ್ನು ತಿರಸ್ಕರಿಸಲಾಗಿದೆ.ಪ್ರತೀ ಪಂಚಾಯತ್ ನಲ್ಲಿ ಬಹಳಷ್ಟು ಅರ್ಜಿಯ ಗಂಟಿದೆ. ಆ ಗಂಟು ಬಿಚ್ಚೋ ಕೆಲಸವನ್ನು ಮಾಡಬೇಕಿದೆ. ಹಿರಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದೇನೆ.ಹಿರಿಯಡ್ಕದಲ್ಲಿ ನಾಡ ಕಚೇರಿ ಸ್ಥಾಪನೆಯ ಅಗತ್ಯತೆ ಇದೆ. ಕಾಪು ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇರಬಾರದು ಅನ್ನೋ ಮಹದಾಸೆ ನನ್ನದು ಹೀಗಾಗಿ ಮಣಿಪುರದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕೆಲಸ ಆರಂಭವಾಗಿದೆ ಎಂದಿದ್ದಾರೆ.
'ವಿನಯಣ್ಣನ ಬಂಡವಾಳ ಪ್ರಾಮಾಣಿಕ ಜನಸೇವೆ ಮಾತ್ರ' - ಶಕುಂತಳಾ ಶೆಟ್ಟಿ
ವಿನಯಣ್ಣ ನೋಡೋಕೆ ಚಂದ, ಪ್ರಾಮಾಣಿಕತೆಯಿಂದ ಅವರು ಮಾಡೋ ಕೆಲಸನೂ, ಅವರ ಕ್ಷೇತ್ರನೂ ಚಂದ ಮಾಡೋ ಕೆಲಸವನ್ನು ಮಾಡುತ್ತಿದ್ದಾರೆ ಅಂತಾ ಮಾತು ಆರಂಭಿಸಿದ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ಬಿಜೆಪಿ ಹಿಂದುತ್ವದ ವಿರುದ್ಧ ಹಿಂದುತ್ವ ರಾಜಕೀಯ ಮಾಡ್ತಿದೆ. ವಿವಿಧತೆಯಲ್ಲಿ ಏಕತೆಯಲ್ಲಿ ರಾಜಕೀಯ ಮಾಡೋ ಕಾಂಗ್ರೆಸ್ ಪಕ್ಷದ್ದು ನಿಜವಾದ ಹಿಂದುತ್ವ. ವಿನಯಣ್ಣ ಪುತ್ತೂರಿನಲ್ಲಿ ಶಾಸಕರಾಗಿರುವಾಗ ಕ್ಷೇತ್ರವನ್ನು ಅಭಿವ್ರದ್ಧಿ ಮಾಡೋದರ ಜೊತೆಗೆ ಕ್ಷೇತ್ರದ ಜನತೆಯನ್ನು ಸಮಾನತೆಯಿಂದ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದಾರೆ. ಕಾಪು ಕ್ಷೇತ್ರದಲ್ಲಿ ಆಗಿರೋ ಅಭಿವ್ರದ್ಧಿ ಕೆಲಸ ವಿನಯಣ್ಣನ ಕಾಲದಲ್ಲಿ ಆಗಿದ್ದು. ವಿನಯಣ್ಣನ ಬಂಡವಾಳ ಕೇವಲ ಜನಸೇವೆ ಬಿಟ್ರೆ ಏನೂ ಇಲ್ಲ. ಕೆಲಸದಲ್ಲಿ ಮಾತ್ರ ಅವರದ್ದು ರಾಜಕೀಯ. ವಿನಯಣ್ಣ ಗೆದ್ರೆ ಈ ಬಾರಿ ರಾಜ್ಯ ಸಂಪುಟದಲ್ಲಿ ಮಂತ್ರಿಯಾಗೋದು ಖಚಿತ. ಇದನ್ನು ಕ್ಷೇತ್ರದ ಜನತೆ ಅರ್ಥಮಾಡಿಕೊಂಡು ಮತದಾನ ಮಾಡಬೇಕು. ಅಂತಾ ಶಕುಂತಳಾ ಶೆಟ್ಟಿ ಹೇಳಿದ್ದಾರೆ.
ಈ ಸಂಧರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ,ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಕ್ರಷ್ಣ ಪೂಜಾರಿ, ಮೈಕಲ್ ಡಿಸೋಜ, ಅಬ್ದುಲ್ ಅಜೀಜ್, ಸೋಮನಾಥ್, ಸುನೀಲ್ ರಾಜ್ ಶೆಟ್ಟಿ, ರೋಹನ್, ರಮೀಜ್, ಅಜೀಜ್, ಡೇವಿಡ್ ಡಿಸೋಜ, ಜಿತೇಂದ್ರ ಫುಟಾರ್ಡೊ, ದೇವಿ ಪ್ರಸಾದ್ ಶೆಟ್ಟಿ, ರಾಜಶೇಖರ ಕೋಟ್ಯಾನ್, ನೀರೆಕ್ರಷ್ಣ ಶೆಟ್ಟಿ, ಸಂತೋಷ್ ಕುಲಾಲ್, ಚರಣ್ ವಿಠಲ್, ಶಶಿಧರ ಜತ್ತನ್, ಸಂದೇಶ್, ದಿಲೀಪ್ ಹೆಗ್ಡೆ, ಜಿತೇಂದ್ರ ಫುಟಾರ್ಡೊ, ಗುರುದಾಸ್ ಭಂಡಾರಿ, ಭಾಸ್ಕರ ಪೂಜಾರಿ, ಉದ್ಯಾವರ ನಾಗೇಶ್, ಹರೀಶ್ ಕಿಣಿ, ಸುರೇಶ್ ನಾಯಕ್, ಪುಷ್ಪ ಅಂಚನ್, ಸಂಧ್ಯಾ, ವಿನೋದ್ ಉಪಸ್ಥಿತರಿದ್ದರು.