ಮಂಗಳೂರು, ಮೇ 08 (DaijiworldNews/MS): "ಸ್ವಾರ್ಥ ರಹಿತ ಜನಹಿತ ಕೆಲಸ ಮಾಡಲೂ ಇಚ್ವಿಸುವವರೆಲ್ಲರೂ ಆಮ್ ಆದ್ಮಿ ಪಕ್ಷದ ಜತೆ ಕೈ ಜೋಡಿಸಬೇಕು. ನಾವೆಲ್ಲಾ ಒಂದಾಗಿ ಒಂದು ಸುಂದರ ನಾಡನ್ನು ಕಟ್ಟೋಣ" ಎಂದು ಆಮ್ ಆದ್ಮಿ ಪಕ್ಷದ ಹಿತೈಷಿ, ಪೋಷಕ ಹಾಗೂ ಅನಿವಾಸಿ ಉದ್ಯಮಿ ಮೈಕಲ್ ಡಿಸೋಜಾ ಅವರು ಹೇಳಿದ್ದಾರೆ.
ಮಂಗಳೂರು ದಕ್ಷಿಣದ ಅಭ್ಯರ್ಥಿ ಸಂತೋಷ ಕಾಮತ್ ಪರವಾಗಿ ಬಸ್ತಿ ಗಾರ್ಡನ್ ಇಂದ ಲೋವರ್ ಕಾರಸ್ಟ್ರಿಟ್ ತನಕ ನಡೆದ ಮನೆ ಮನೆ ಪ್ರಚಾರದಲ್ಲಿ ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಸುಮಾರು 200 ಮನೆಗಳನ್ನು ತಲುಪಿದ ಅವರು ಜನತೆಯ ಉತ್ತಮ ಸ್ಪಂದನೆ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಸ್ಟೀಫನ್ ಪಿಂಟೋ, ಪ್ರಸಾದ್ ಬಜಿಲಕೆರಿ, ವೆಂಕಟೇಶ ಬಾಳಿಗಾ, ಜೈದೇವ ಶೆಣೈ, ನಜಿರ್ ಅಹ್ಮದ್, ಹಮೀದ್ ಪಡೀಲ್, ವಾಸುದೇವ್ ಕುಲಶೇಖರ ಹಾಗು ಇತರರು ಉಪಸ್ಥಿತರಿದ್ದರು.