ಕಾಸರಗೋಡು, ಮೇ 07 (DaijiworldNews/SM): ಕೆಥೋಲಿಕ್ ಸಭಾ ಕಾಸರಗೋಡು ವಲಯದ ನೂತನ ಅಧ್ಯಕ್ಷರಾಗಿ ಸಾಹಿತಿ,ಸಂಘಟಕ ರಾಜು ಜೋನ್ ಡಿ ಸೋಜಾ ಮಣಿಯಂಪಾರೆ ಆಯ್ಕೆಯಾಗಿದ್ದಾರೆ.
ಕೊಂಕಣಿ ಸಾಹಿತಿ, ತುಳು ಕನ್ನಡ ಸಾಹಿತಿಯಾಗಿ ಗುರುತಿಸಿಕೊಂಡಿರುವ ಇವರು ರಂಗ ನಟರಾಗಿ ಹಾಗೂ ಕಾರ್ಯಕ್ರ ಮ ನಿರೂಪಕರಾಗಿ ಚಿರಪರಿಚಿರಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಕಥೊಲಿಕ್ ಸಭಾ ಸಂಘಟನೆಯ ಮಣಿಯಂಪಾರೆ ಘಟಕದ ಅಧ್ಯಕ್ಷರಾಗಿ ಹಾಗೂ ವಲಯ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕೊಂಕಣಿ ಪತ್ರಿಕೆಯಾದ 'ಮಹಿಮಾ' ಇದರ ಉಪ ಸಂಪಾದಕರಾಗಿ ಕಳೆದ 23 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಸಂಘಟನೆಯ ವಲಯ ಮಟ್ಟದ ಚುನಾವಣಾ ಪ್ರಕ್ರಿಯೆಯು ರವಿವಾರ ಕುಂಬಳೆಯಲ್ಲಿ ನಡೆಯಿತು. ಸಂಘಟನೆಯ ಕೇಂದ್ರ ಸಮಿತಿಯ ಲ್ಯಾನ್ಸಿ ಡಿಕುನ್ಹಾ ಹಾಗೂ ಸಂತೋಷ್ ಸಲ್ಡಾನ್ಹಾ ಇವರು ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಅಧ್ಯಕ್ಷರಾಗಿ ರಾಜು ಜೋನ್ ಆಯ್ಕೆಯಾದರೆ ಉಪಾಧ್ಯಕ್ಷರಾಗಿ ಯೇಸುಪ್ರಸಾದ್ ವರ್ಕಾಡಿ, ಜೊಸ್ಸಿ ಬೇಳಾ (ಕಾರ್ಯದರ್ಶಿ) ನವೀನ್ ಮಂಜೇಶ್ವರ (ಜೊತೆ ಕಾರ್ಯದರ್ಶಿ),ಫ್ರಾನ್ಸಿಸ್ ತಲಪಾಡಿ (ಕೋಶಾಧಿಕಾರಿ), ಜೋರ್ಜ್ ಅನಿಲ್ ನಾರಂಪಾಡಿ (ಸಹ ಕೋಶಾಧಿಕಾರಿ), ಲವೀನಾ ವರ್ಕಾಡಿ (ಸ್ತ್ರೀ ಹಿತಾ ಸಂಚಾಲಕಿ), ರಾಜು ಸ್ಟೀಫನ್ ಕುಂಬ್ಳಾ (ಅಮ್ಚೊ ಸಂದೇಶ್ ಪ್ರತಿನಿಧಿ), ಸುನಿಲ್ ತಲಪಾಡಿ(ರಾಜಕೀಯ ಸಂಚಾಲಕ), ಪ್ರವೀಣ್ ಪ್ರಕಾಶ್ ಕಯ್ಯಾರ್(ಯುವಹಿತಾ ಸಂಚಾಲಕರು), ವಿಕ್ಟರ್ ಬೋವಿಕ್ಕಾನ(ಸಮುದಾಯ ಅಭಿವೃದ್ಧಿ ಸಂಚಾಲಕರು), ವಿಲ್ಫ್ರೆಡ್ ಮನೋಹರ್ ಬೇಳಾ ನಿಕಟಪೂರ್ವ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.