ಉಡುಪಿ,ಮೇ7(DaijiworldNews/KH):ಸರಕಾರಿ ಕೊಳದ ಬಳಿ ಹೆಣ್ಣು ಮಗುವಿನ ಮೃತದೇಹ ಪತ್ತೆಯಾದ ಘಟನೆ ಶಿರ್ವ ಸಮೀಪದ ಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿರ್ಲಪಲ್ಕೆಯಲ್ಲಿ ನಡೆದಿದೆ.
ಬೆಳ್ಳೆ ಗ್ರಾಮ ಪಂಚಾಯಿತಿಯ ಒಂದನೇ ವಾರ್ಡಿನ ಸದಸ್ಯ ಅಶೋಕ್ ಅವರು ಈ ವಿಷಯ ತಿಳಿದ ಕೂಡಲೇ ಬೆಳ್ಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಧಾಕರ ಪೂಜಾರಿ ಅವರಿಗೆ ಮಾಹಿತಿ ನೀಡಿದ್ದಾರೆ. ಕೊಳದ ಪಕ್ಕದಲ್ಲಿ ಶವ ಪತ್ತೆಯಾಗಿದ್ದು, ಮಗುವನ್ನು ಆಕೆಯ ಪೋಷಕರು ಉದ್ದೇಶಪೂರ್ವಕವಾಗಿ ಬಿಸಾಡಿರಬಹುದು ಎಂಬ ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.