ಉಡುಪಿ, ಮೇ 07 (DaijiworldNews/HR): ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎಲ್ಲಾ ಗ್ಯಾರಂಟಿ ಗಳನ್ನು ಜಾರಿಗೊಳಿಸಿದರೆ ನಾನು 2028ರ ಮೇ 7 ರಂದು ತಲೆ ಬೋಳಿಸಿ ಕೆಪಿಸಿಸಿ ಬೆಂಗಳೂರು ಕಚೇರಿ ಎದುರು ಕುಳಿತುಕೊಳ್ಳುತ್ತೆನೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ನವರು ಮನೆ ಮನೆಗೆ ಗ್ಯಾರಂಟಿ ಕಾರ್ಡ್ ಗಳನ್ನು ನೀಡುತ್ತಾ ಬರುತಿದ್ದಾರೆ. ಕಾಂಗ್ರೆಸ್ ಜನರನ್ನು ಈ ಮೂಲಕ ಮೂರ್ಖರನ್ಬಾಗಿ ಮಾಡುತ್ತಿದೆ. ಇದಕ್ಕಾಗಿ ಚೆಕ್ ಮಾದರಿಯನ್ನು ನೀಡಿ ಅದರಲ್ಲಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನ ಸಹಿ ಹಾಕಿ ಇದನ್ನು ಬ್ಯಾಂಕ್ ಗೆ ಹಾಕಿದರೆ ಹಣ ಸಿಗುತ್ತಿದೆ ಎಂದು ಹಳ್ಳಿಯ ಜನರನ್ನು ಕಾಂಗ್ರೆಸ್ ನವರು ಮೂರ್ಖರನ್ನಾಗಿಸುತ್ತಿದ್ದರೆ. ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಒಂದು ವೇಳೆ ಬಂದಲ್ಲಿ ಮತ್ತು ಅವರು ಹೇಳಿರುವ ಗ್ಯಾರಂಟಿ ಗಳನ್ನು ಸಂಪೂರ್ಣ ವಾಗಿ ಜಾರಿಗೆ ತಂದಲ್ಲಿ 2028 ಮೇ ತಿಂಗಳಲ್ಲಿ ನಾನು ಕೆಪಿಸಿಸಿ ಬೆಂಗಳೂರು ಕಚೇರಿ ಮುಂದೆ ತಲೆ ಬೋಳಿಸಿ ಅರ್ಧ ದಿನ ಕುಳಿತುಕೊಳ್ಳುತ್ತೇನೆ " ಎಂದರು.
ಇನ್ನು ಕಾಂಗ್ರೆಸ್ ನ ಮೇಲೆ ಜನರಿಗೆ ಗ್ಯಾರಂಟಿ ಇಲ್ಲದ ಮೇಲೆ ಈ ರೀತಿಯ ಗ್ಯಾರಂಟಿ ಕಾರ್ಡ್ ಗಳನ್ನು ನೀಡಿ ಜನರನ್ನು ಮೋಸ ಮಾಡುತ್ತಿದ್ದೆ ಎಂದಾದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಈ ದೇಶದಲ್ಲಿ ಹೇಗೆ ಇದೆ ಎಂಬುವುದನ್ನು ಊಹಿಸಬೇಕು. ಯಾವುದೇ ಸರಕಾರ ಈ ಗ್ಯಾರಂಟಿ ಗಳನ್ನು ಪೂರ್ಣ ಗೊಳಿಸಲು ಸಾಧ್ಯ ಇಲ್ಲ. ಈ ರೀತಿಯಲ್ಲಿ ಜನರನ್ನು ಮರಳಯ ಮಾಡುವುದು ಕಾಂಗ್ರೆಸ್ ಗೆ ಶೋಭೆ ತರುವುದಿಲ್ಲ. ಈಶ್ವರಪ್ಪ ನವರು ಮಾಡಿದ ಹಾಗೆ ನಾನು ಇದನ್ನು ಸುಟ್ಟು ಹಾಕುತ್ತಿದೆ ಆದರೆ ನನಗೆ ಮನಸ್ಸಿಗೆ ಅದು ಒಪ್ಪುವುದಿಲ್ಲ .ಈ ರೀತಿಯಲ್ಲಿ ಜನರಿಗೆ ಮೋಸ ಮಾಡಬಾರದು ಎಂದು ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.