ಮಂಗಳೂರು, ಮೇ 07 (DaijiworldNews/HR): ದಕ್ಷಿಣ ಕನ್ನಡ ಹಾಗೂ ಸುತ್ತಲಿನ ಜಿಲ್ಲೆಗಳ ಹಜ್ ಯಾತ್ರಾರ್ಥಿಗಳಿಗೆ ಪವಿತ್ರ ಹಜ್ ಯಾತ್ರೆ ಸುಗಮವಾಗಿ ಹೆಚ್ಚು ಅನುಕೂಲವಾಗುವ ನೆಲೆಯಲ್ಲಿ ಒಂದು ಹಜ್ ಭವನವನ್ನು ನಿರ್ಮಾಣ ಮಾಡಬೇಕೆಂದು ಮಾಜಿ ಶಾಸಕ ಬಿ.ಎ. ಮೊಯ್ದೀನ್ ಬಾವ ರವರ ಸತತ ಪ್ರಯತ್ನದಿಂದ ಚಾಲನೆ ಸಿಗಲು ಅಣಿಯಾಗಿದೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವೇ ಇರುವ ಮಳವೂರು ಗ್ರಾಮದ ಸರ್ವೇ ನಂಬ್ರ 63/3 ರಲ್ಲಿ 1 ಎಕ್ರೆ 12.5 ಸೆಂಟ್ಸ್ ಹಾಗೂ ಸರ್ವೆ ನಂಬ್ರ 40/51 ರಲ್ಲಿನ 0.375 ಎಕ್ರೆ ಜಮೀನನ್ನು ಸ್ವಯಂಪ್ರೇರಿತರಾಗಿ ಮೊಹಿದಿನ್ ಬಾವ ರವರ ಸಹೋದರ ಬಿ.ಯಂ.ಫಾರೂಖ್ ರವರು ಹಜ್ ಭವನ ನಿರ್ಮಾಣಕ್ಕೆ ಸರಕಾರಕ್ಕೆ ದೇಣಿಗೆಯಾಗಿ ನೀಡಿರುತ್ತಾರೆ.
ಇನ್ನು ಕಳೆದ ಒಂದು ದಶಕದಿಂದ ಯಾರಿಂದಲೂ ಸಾಧ್ಯವಾಗದ ಈ ಮಹತ್ ಕಾರ್ಯವನ್ನು ಸ್ವತಹ ಮೊಹಿದಿನ್ ಬಾವ ನವರು ಅತಿಯಾದ ಮುತುವರ್ಜಿ ವಹಿಸಿ ಜಿಲ್ಲೆಯ ಮುಸ್ಲಿಂ ಸಮುದಾಯದ ಅಪೂರ್ವ ಕನಸನ್ನು ನನಸು ಮಾಡುವತ್ತ ಸಫಲರಾಗಿರುತ್ತಾರೆ.