ಉಡುಪಿ, ಮೇ 06 (DaijiworldNews/HR): ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಲ್ಲಿ ಅನಿವಾಸಿ ಭಾರತೀಯ ರೊಗೆ ಒಂದು ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಲಾಗುವುದು" ಎಂದು ಅಖಿಲ ಭಾರತ ಕಾಂಗ್ರೆಸ್ ಕಮಿಟಿಯ ಅನಿವಾಸಿ ಭಾರತೀಯ ವಿಭಾಗದ ಕಾರ್ಯದರ್ಶಿ ಡಾಕ್ಟರ್ ಆರತಿ ಕೃಷ್ಣ ಹೇಳಿದ್ದಾರೆ.
ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಅನಿವಾಸಿ ಭಾರತೀಯರು ಕೊರೊನಾ ಮತ್ತು ಇತರ ತುರ್ತು ಸಂಧರ್ಭದಲ್ಲಿ ಅನಿವಾಸಿ ಕನ್ನಡಿಗರು ಕರ್ನಾಟಕ ರಾಜ್ಯ ಸರಕಾರದಲ್ಲಿ ಸೂಕ್ತ ಸಚಿವಾಲಯ ಇಲ್ಲದೇ ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು. ಕರ್ನಾಟಕದಲ್ಲಿ ಅನಿವಾಸಿ ಕನ್ನಡಿಗರ ಸಮಿತಿ ಮಾತ್ರವೇ ಕಳೆದ ಹಲವು ವರ್ಷಗಳಿಂದ ಈ ಸಮಿತಿಗೆ ಅಧ್ಯಕ್ಷರು ಕೂಡಾ ಇಲ್ಲ. ಇದರಿಂದಾಗಿ ಅನಿವಾಸಿ ಕನ್ನಡಿಗರಿಗೆ ತೀವ್ರ ಸಮಸ್ಯೆ ಯಾಗುತ್ತಿದೆ. ಈ ವಿಷಯವನ್ನು ಕಾಂಗ್ರೆಸ್ ಪಕ್ಷದ ವರಿಷ್ಟರ ಗಮನಕ್ಕೆ ತಂದು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಯಲ್ಲಿ ಈ ಅಂಶವನ್ನು ವಿಶೇಷವಾಗಿ ಸೇರಿಸಲಾಗಿದೆ" ಎಂದರು.
"ಇದನ್ನು ಹೊರತುಪಡಿಸಿ ಪ್ರಣಾಳಿಕೆಯಲ್ಲಿ ಅನಿವಾಸಿ ಕನ್ನಡಿಗರಿಗಾಗಿ ಪ್ರತಿ ವರ್ಷ ಪ್ರವಾಸಿ ಭಾರತೀಯ ದಿವಸ್ ಮಾದರಿಯಲ್ಲಿ "ಕನ್ನಡ ನಮ್ಮದು- ಕನ್ನಡಿಗರು ನಾವು” ವಿಶೇಷ ಕಾರ್ಯಕ್ರಮ ಆಯೋಜನೆ. ಅನಿವಾಸಿ ಕನ್ನಡಿಗರ ವ್ಯವಹಾರಕ್ಕಾಗಿ ಪ್ರತ್ಯೇಕ ಸಚಿವಾಲಯ ಅನಿವಾಸಿ ಕನ್ನಡಿಗರು ರಾಜ್ಯದಲ್ಲಿ ಉದ್ಯಮ ನಡೆಸಲು ಉತ್ತೇಜಿಸಲು ರೂ 1,000 ಕೋಟಿ ಆವರ್ತನ ನಿಧಿ ಸ್ಥಾಪನೆ ಯೋಜನೆ ಯನ್ನು ಪ್ರಣಾಳಿಕೆ ಯಲ್ಲಿ ಸೇರಿಸಲಾಗಿದೆ" ಎಂದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಅನಿವಾಸಿ ಭಾರತೀಯ ಕಾಂಗ್ರೆಸ್ ವಿಭಾಗದ ಉಸ್ತುವಾರಿ ಉಡುಪಿ ಶೇಕ್ ಹಾಮಿದ್ ಉಪಸ್ಥಿತರಿದ್ದರು.