ಉಳ್ಳಾಲ, ಮೇ 05 (DaijiworldNews/SM): ಇಲ್ಲಿನ ನಗರಸಭಾ ವ್ಯಾಪ್ತಿಗೆ ಒಳಪಡುವ ಹಲವೆಡೆ ಅಳವಡಿಸಿರುವ ಕುಡಿಯುವ ನೀರಿನ ಪಂಪ್ ಗಳ ಕೇಬಲ್ ಗಳನ್ನು ತುಂಡರಿಸಿ ಕಳವು ನಡೆಸಿರುವ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀರಿನ ಸ್ಥಾವರಗಳಿಂದ ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಬಸ್ತಿಪಡ್ಪು, ನಗರಸಭಾ ವಸತಿಗೃಹದ ಬಳಿಯ ಪಂಪ್ , ನಗರಸಭೆ ಕಚೇರಿ ಸಮೀಪದ ತೆರೆದ ಬಾವಿಗೆ ಅಳವಡಿಸಿದ ಪಂಪ್ ಹಾಗೂ ಉಳ್ಳಾಲ ಮೊಗವೀರಪಟ್ನ ಹಳೇಯ ಐಸ್ ಫ್ಯಾಕ್ಟರಿ ಸಮೀಪದ ಪಂಪ್ ನಿಂದ 75 ಮೀಟರ್ ಕೇಬಲ್ಲುಗಳನ್ನು ಎ.28 ರಿಂದ 29 ರ ಮಧ್ಯರಾತ್ರಿ ಕಳ್ಳರು ಕಳವು ನಡೆಸಿದ್ದಾರೆ. ಕಳವಾಗಿರುವ ಕೇಬಲ್ಲುಗಳ ಒಟ್ಟು ಮೌಲ್ಯ ರೂ. 11,250 ಅಂದಾಜಿಸಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.