ಮಂಗಳೂರು, ಮೇ 05 (DaijiworldNews/HR): ಸುಮಾರು 43 ವರ್ಷಗಳ ಹಿಂದೆ ಬಾಲಕಿಯೊಬ್ಬಳು ತನ್ನ ಕುಟುಂಬದಿಂದ ಆಕಸ್ಮಿಕವಾಗಿ ಬೇರ್ಪಟ್ಟಿದ್ದು, ಇದೀಗ ಆಕೆ ತನ್ನ ಕುಟುಂಬದವರನ್ನು ಹುಡುಕಾಡುತ್ತಿದ್ದಾರೆ.
ಮಂಗಳೂರು ಬಸವನ ಗುಡಿ ರಸ್ತೆಯ ಕಾರ್ ಸ್ಟ್ರೀಟ್ ನಿವಾಸಿ ಛಾಯಾ ಗಾಣಿಗ (48) ಅವರು ಸದಾನಂದ ಗಾಣಿಗ ಮತ್ತು ಗಿರಿಜಾ ಗಾಣಿಗ ದಂಪತಿಯ ಪುತ್ರಿಯಾಗಿದ್ದು, 43 ವರ್ಷಗಳ ನಂತರ ಕುಟುಂಬವನ್ನು ಹುಡುಕುತ್ತಿದ್ದಾರೆ.
ಛಾಯಾ ಗಾಣಿಗ ಕುಟುಂಬದೊಂದಿಗೆ ಐದು ವರ್ಷ ಕಳೆದಿದ್ದು, ನಂತರ ಛಾಯಾ ಅವರನ್ನು ಕುಟುಂಬವೊಂದು ದತ್ತು ಪಡೆದು ಜರ್ಮನಿಗೆ ವಾಸಗಿದ್ದರು. ಇದೀಗ 43 ವರ್ಷಗಳ ನಂತರ ಮಂಗಳೂರಿಗೆ ಮರಳಿದ ಛಾಯಾ ಈಗ ತನ್ನ ಕುಟುಂಬ ಮತ್ತು ಸಂಬಂಧಿಕರನ್ನು ಹುಡುಕುತ್ತಿದ್ದಾರೆ.
ಛಾಯಾ ಗಾಣಿಗ ಅವರ ಕುಟುಂಬದವರು ಯಾರೇ ಬಂದರೂ 8618928287 ಗೆ ಸಂಪರ್ಕಿಸಲು ಕೋರಲಾಗಿದ್ದು, ಮಾಹಿತಿ ನೀಡಿದವರಿಗೆ 10,000 ರೂ. ನೀಡಲಾಗುವುದು.