ಸುಳ್ಯ, ಮೇ 5(Daijiworld News/KH): ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಶಂಶುದ್ದೀನ್ ಅವರ ಮನೆಗೆ ನುಗ್ಗಿದ ಕಳ್ಳರು 20 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದಿರುವ ಘಟನೆ ನಡೆದಿದೆ.
ಶಂಶುದ್ದೀನ್ ಬುಧವಾರದಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕುಟುಂಬ ಸಮೇತ ಮಂಗಳೂರಿಗೆ ಹೋಗಿ ರಾತ್ರಿ 9.45ರ ಸುಮಾರಿಗೆ ಮನೆಗೆ ಮರಳಿದ್ದರು. ಮನೆಯ ಮುಂಬಾಗಿಲು ಮುರಿದಿರುವುದನ್ನು ಕುಟುಂಬದವರು ಗಮನಿಸಿ ಒಳಗೆ ಹೋಗಿ ಪರಿಶೀಲಿಸಿದಾಗ ಕಪಾಟುಗಳೂ ಒಡೆದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇನ್ನು14 ಬ್ರಾಂಡ್ ವಾಚ್ಗಳು, 20 ಚಿನ್ನದ ಉಂಗುರಗಳು, ಮೂರು ಪೆಂಡೆಂಟ್ಗಳು, ಎರಡು ವಜ್ರದ ಬಳೆಗಳು, ಒಂದು ಡೈಮಂಡ್ ಚೈನ್ ಮತ್ತು 55,000 ರೂ. ನಗದು ಸೇರಿದಂತೆ ಕಳವಾದ ವಸ್ತುಗಳ ಒಟ್ಟು ಮೌಲ್ಯ 20 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುಳ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.