ಪುತ್ತೂರು, ಮೇ 04 (DaijiworldNews/SM): ಬೆಂಗಳೂರಿನಲ್ಲಿ ಪುತ್ತೂರು ಮೂಲದ ಯುವತಿಯೋರ್ವಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ ಸ್ಥಾನತ್ತಾರು ಚಂದ್ರಶೇಖರ ರೈ ಎಂಬವರ ಪುತ್ರಿ ಶೃತಿ(22) ಆತ್ಮಹತ್ಯೆ ಮಾಡಿಕೊಂಡ ಯುವತಿ.
ಕಳೆದೆರಡು ವರ್ಷಗಳಿಂದ ಬೆಂಗಳೂರಿನಲ್ಲಿ ಆನಿಮೇಷನ್ ಶಿಕ್ಷಣ ಪಡೆಯುತ್ತಿದ್ದ ಶೃತಿ ಅಲ್ಲೇ ವಾಸ್ತವ್ಯವಿದ್ದರು. ಕೋರ್ಸ್ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿದ್ದರು. ಬಾಡಿಗೆ ರೂಮಿನಲ್ಲಿದ್ದ ಅವರು ಎ.29ರಂದು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರೆನ್ನಲಾಗಿದೆ. ವಿಷಯ ತಿಳಿದು ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಎ.30ರಂದು ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ.