ಉಡುಪಿ, ಮೇ 04 (DaijiworldNews/MS): “ರಾಜ್ಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧ ಮಾಡಬೇಕು ಎಂದು ತಿಳಿಸಿದ್ದಾರೆ.ಆದರೆ, ವೀರಪ್ಪ ಮೊಯ್ಲಿ ಅವರು ಬಜರಂಗದಳವನ್ನು ನಿಷೇಧ ಮಾಡುವ ಪ್ರಸ್ತಾವನೆಯಿಲ್ಲ ಎಂದಿದ್ದಾರೆ.ನಾವು ವೀರಪ್ಪ ಮೊಯ್ಲಿ ಅವರ ಕಾಂಗ್ರೆಸ್ ನ್ನು ನಂಬಬೇಕೋ ಅಥವಾ ಡಿ.ಕೆ.ಶಿವಕುಮಾರ್ ರ ಕಾಂಗ್ರೆಸ್ ನ್ನು ನಂಬಬೇಕೋ ಗೊತ್ತಿಲ್ಲ.ಕಾಂಗ್ರೆಸ್ ಬಜರಂಗದಳವನ್ನು ನಿಷೇಧ ಮಾಡುವ ಮಾನಸಿಕ ಸ್ಥಿತಿ,ಉದ್ದೇಶ ಜನರಿಗೆ ತಿಳಿದಿದೆ” ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯ್ಕ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಾತನಾಡಿದ ಅವರು “ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ.ಕಾಂಗ್ರೆಸ್ ಸರಕಾರ ಬಂದರೆ, ಧಮ್ ಇದ್ದರೆ ಬಜರಂಗದಳವನ್ನು ನಿಷೇಧ ಮಾಡಿ ನೋಡಿ, ನಿಮ್ಮ ಪರಿಸ್ಥಿತಿ ಕರ್ನಾಟಕದಲ್ಲಿ ಏನಾಗುತ್ತದೆ ಎಂದು ಪ್ರತಿಯೊಬ್ಬ ಹಿಂದು ನಿಮ್ಮ ಚಲನವಲನವನ್ನ ನೋಡುತ್ತಾ ಇದ್ದಾರೆ. ಮೇ.10ರಂದು ಕರ್ನಾಟಕದ ಜನತೆ ಉತ್ತರಿಸುತ್ತಾರೆ. ಕೇವಲ ಮುಸ್ಲಿಂರಿಗೆ ಮತ್ತು ಜಿಹಾದಿಗಳಿಗೆ ಖುಷಿ ಮಾಡಲು ನೀವು ಈ ರೀತಿ ಮಾಡುತ್ತಿದ್ದಲ್ಲಿ ನಿಮ್ಮ ಗೋರಿಯನ್ನು ಕರ್ನಾಟಕದಲ್ಲಿ ನೀವೇ ತೋಡಿದ ಹಾಗಾಗುತ್ತದೆ. ಮದರಸಾ ವನ್ನು ಬ್ಯಾನ್ ಮಾಡುತ್ತೇವೆ ಎಂದು ಹೇಳಲು ನಿಮಗೆ ತಾಕತ್ತಿದೆಯಾ? ಸುಪ್ರಿಂಕೋರ್ಟ್ ಮಸೀದಿಗಳಲ್ಲಿ ನಿರ್ದಿಷ್ಟ ಮಟ್ಟಕ್ಕಿಂತ ಅಧಿಕ ಮಟ್ಟದಲ್ಲಿ ಮೈಕ್ ಶಬ್ದಬರಬಾರದು ಎಂದು ಆದೇಶ ನೀಡಿತ್ತು. ನಿಮ್ಮ ಬ್ರದರ್ಸ್ ಗೆ ನೀವು ಅದನ್ನು ಕರೆದು ಹೇಳಿದ್ದೀರಾ? ಲವ್ ಜಿಹಾದ್ ಮಾಡುವ ಪುಂಡ ಪೋಕರಿ ಮುಸಲ್ಮಾನರಿಗೆ ಆ ರೀತಿ ಮಾಡಬೇಡಿ ಎಂದು ನೀವು ಹೇಳಿದ್ದೀರಾ? ಅದನ್ನು ಬಿಟ್ಟು ಕೇವಲ ಮುಸಲ್ಮಾನ ಮತಗಳನ್ನು ಪಡೆಯಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್ ಬಜರಂಗದಳವನ್ನು ನಿಷೇಧ ಮಾಡಲು ಹೊರಟಿರುವ ನಿಮ್ಮ ತಲೆಯಲ್ಲಿ ಸೆಗಣಿ ತುಂಬಿದೆಯಾ? ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಕ್ತಾರ ರಾಘವೇಂದ್ರ ಕಿಣಿ, ಸಹ ವಕ್ತಾರ ಅಂಬಾಲಪಾಡಿ ಶಿವಕುಮಾರ್ ,ಗಿರೀಶ್ ಅಂಚನ್ ಉಪಸ್ಥಿತರಿದ್ದರು