ಉಡುಪಿ, ಮೇ 04 (DaijiworldNews/MS): ಉಡುಪಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಮತ್ತು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಉಡುಪಿಯ ಎಲ್ ಐಸಿ ಮತ್ತು ವಿವಿಧ ಬ್ಯಾಂಕುಗಳು, ಆಟೋ ರಿಕ್ಷಾ ಚಾಲಕರ ಬಳಿ ಹೋಗಿ ಮತಯಾಚನೆ ಮಾಡಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಮಣಿಪಾಲ ಆಟೋ ನಿಲ್ದಾಣದ ಬಳಿ ಆಟೋ ರಿಕ್ಷಾ ಚಾಲಕರೊಂದಿಗೆ ಮತ ಯಾಚಿಸಿ, “ರಿಕ್ಷಾ ಚಾಲಕರಿಗಿಂದು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವಂತಾಗಿದೆ. ಪೆಟ್ರೋಲ್, ಡೀಸೆಲ್, ಆಟೋ ರಿಕ್ಷಾದ ಮೇಲಿನ ಬೆಲೆ ಏರಿಕೆ, ಇನ್ಶುರೆನ್ಸ್, ತೆರಿಗೆಗಳು ಐದು ಪಟ್ಟು ಹೆಚ್ಚಾಗಿದೆ. ಬಡವರಿಗೆ ಬೆಂಗಾವಲಾಗಿ ಇರುವ ಪಕ್ಷ ಕಾಂಗ್ರೆಸ್” ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ ಗಪೂರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಇಂದ್ರಾಳಿ 192 ರ ಬೂತ್ ಅಧ್ಯಕ್ಷ ರಾಘವೇಂದ್ರ ನಾಯಕ್ ಇಂದ್ರಾಳಿ, ರಿಕ್ಷಾ ಚಾಲಕರು ಮೊದಲಾದವರು ಉಪಸ್ಥಿತರಿದ್ದರು.