ಉಡುಪಿ, ಮೇ 03 (DaijiworldNews/MS): ಭಜರಂಗದಳ ನಿಷೇಧಿಸುವ ಯಾವುದೇ ಪ್ರಸ್ತಾವನೆ ಕಾಂಗ್ರೆಸ್ ಮುಂದೆ ಇಲ್ಲ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಸ್ಪಷ್ಟನೆ ನೀಡಿದ್ದಾರೆ.
ಉಡುಪಿಯಲ್ಲಿ ಬುಧವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗಲೂ ಭಜರಂಗದಳ ನಿಷೇಧಿಸುವ ಪ್ರಸ್ತಾವನೆ ಇರಲಿಲ್ಲ. ಇನ್ನು ರಾಜ್ಯ ಸರಕಾರ ಅಂತಹ ಸಂಘಟನೆಗಳನ್ನು ನಿಷೇಧಿಸುವ ಹಕ್ಕು ಹೊಂದಿಲ್ಲಎಂದು ಮೊಯ್ಲಿ ಸ್ಪಷ್ಟನೆ ನೀಡಿದ್ದಾರೆ.
ವಲ್ಲಭಬಾಯಿ ಪಟೇಲ್ ಅವರನ್ನು ಈಗ ಬಿಜೆಪಿ ಆರಾಧಿಸುತ್ತದೆ.ಆದರೆ ಪಟೇಲ್ ಅವರು ಆರೆಸ್ಸೆಸ್ ನ್ನು ಬ್ಯಾನ್ ಮಾಡಿದ್ದರು.ಆದರೆ ಜವಾಹರಲಾಲ್ ನೆಹರೂ ಬ್ಯಾನ್ ವಾಪಾಸು ಪಡೆದರು. ಸುಪ್ರೀಂ ಕೋರ್ಟ್ ದ್ವೇಷ ರಾಜಕೀಯ ಕುರಿತು ಸ್ಪಷ್ಟ ತೀರ್ಪು ನೀಡಿದ್ದು. ಇದರ ಭಾಗವಾಗಿಯೇ ನಾವು ಪ್ರಸ್ತಾಪ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಭಜರಂಗದಳದಂತಹ ಸಂಘಟನೆಯನ್ನು ನಿಷೇಧಿಸುವ ಪ್ರಸ್ತಾಪ ನಮ್ಮ ಮುಂದಿಲ್ಲ. ಈ ಬಗ್ಗೆ ಇಂದು ನಮ್ಮ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಸ್ಪಷ್ಟಪಡಿಸುತ್ತಾರೆ ಎಂದು ತಿಳಿಸಿದ್ದಾರೆ.