ಮಂಗಳೂರು, ಮೇ 05 (DaijiworldNews/MS): ಕರಾವಳಿ ಜಿಲ್ಲೆಯಲ್ಲಿ ಅಲ್ಲಲ್ಲಿ ಕೊಂಚ ಮಳೆಯಾದರೂ, ಬಿಸಿಲಿನ ತಾಪಮಾನ ಮಾತ್ರ ದಿನೇದಿನೇ ಹೆಚ್ಚುತ್ತಿದ್ದು, ಮಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ತೀವ್ರ ಕುಸಿತ ಕಾಣುತ್ತಿದೆ.
ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತ ಈಗಾಗಲೇ ಪಾಲಿಕೆ ವ್ಯಾಪ್ತಿಯಲ್ಲಿ ನೀರು ಪೂರೈಕೆಯಲ್ಲಿ ಕಡಿತ ಆರಂಭಿಸಿಲು ಚಿಂತನೆ ನಡೆಸಿದ್ದು ರೇಷನಿಂಗ್ ನಿಯಮ ತತ್ ಕ್ಷಣದಿಂದಲೇ ಜಾರಿಗೆ ಜಿಲ್ಲಾಡಳಿತ ಮುಂದಾಗಿದೆ.
ಮೇ ೪ ಅಥವಾ ೫ ರಿಂದ ಒಂದು ದಿನ ಬಿಟ್ಟು ನೀರು ಸರಬರಾಜು ಮಾಡಲು ಉದ್ದೇಶಿಸಲಾಗಿದ್ದು ಈ ಕುರಿತು ಅಧಿಕೃತ ಆದೇಶ ಒಂದೇ ಬಾಕಿಯಿದೆ.
ಮಂಗಳೂರಿಗೆ ನೀರು ಕೊರತೆ ಕಾಣದಿಂದ ರೇಷನಿಂಗ್ ಜಾರಿಗೆ ಸಂಬಂಧಿಸಿ ದ.ಕ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮಂಗಳವಾರ ಮಹತ್ವದ ಸಭೆ ನಡೆದಿದ್ದು, ನೀರು ಬಳಕೆ ಮಾಡುವ ಉದ್ಯಮ ಮತ್ತು ಕೈಗಾರಿಕೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.